ಬೆಂಗಳೂರು :
ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣದ ಡಿಸಿಪಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಪ್ರಕರಣಗಳನ್ನು ನೀರುಕುಡಿದಂತೆ ಬೇಧಿಸಿದ ಹೆಗ್ಗಳಿಕೆ ಅಣ್ಣಾಮಲೈ ಅವರದ್ದು.
ಹಾಗಾಗಿ ಎಲ್ಲ ಕಡೆಗಳಿಂದ ಅವರಕಾರ್ಯಕ್ಕೆ ಮೆಚ್ಚುಗೆ ಕೇಳಿ ಬಂದಿತ್ತು. ಅಲ್ಲದೆ ಹೆಚ್ಚು ಫಾಲೋವರ್ಸ್ ಹೊಂದಿರುವ ಅಧಿಕಾರಿ ಎನ್ನುವ ಕೀರ್ತಿಯೂ ಅವರಿಗಿದೆ. ಆದರೆ, ಈಗ ಅವರು ಐಪಿಎಸ್ ವೃತ್ತಿಗೆ ರಾಜೀನಾಮೆ ಕೊಡುತ್ತಿರುವ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ. ಮತ್ತು ಇದೇ ವೇಳೆ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಈ ವಾರವೇ ಅಣ್ಣಾಮಲೈ ರಾಜೀನಾಮೆ ನೀಡಲಿದ್ದಾರಂತೆ. ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅವರು ರಾಜೀನಾಮೆ ಕೊಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
