ಶ್ರೀಗಳಿಗೆ ಭಾರತ ರತ್ನ ನೀಡಲಿ : ಬಾಬಾ ರಾಮ್‍ದೇವ್

ಬೆಂಗಳೂರು:

 ದೇಶದಲ್ಲಿ ಕ್ರೀಡೆ, ಸಂಗೀತ, ರಾಜಕೀಯವಾಗಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಭಾರತ ರತ್ನ ನೀಡಲಾಗುತ್ತದೆ. ಆದ್ರೆ ಶಿಕ್ಷಣ, ತ್ರಿವಿಧ ದಾಸೋಹ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಸಿದ್ಧಗಂಗಾ ಶ್ರೀಗಳಿಗೇಕೆ ಭಾರತ ರತ್ನ ನೀಡಬಾರದು ಎಂದು ಬಾಬಾ ರಾಮ್‍ದೇವ್ ಪ್ರಶ್ನಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಬಾ ರಾಮ್‍ದೇವ್ ಮಾಧ್ಯಮದವರೊಂದಿಗೆ ಮಾತನಾಡಿದರು. ಶ್ರೀಗಳಿಗೆ ಭಾರತ ರತ್ನ ನೀಡುವುದರಿಂದ ಭಾರತ ರತ್ನ ಪುರಸ್ಕಾರಕ್ಕೇ ಗೌರವ ಹೆಚ್ಚಾಗಲಿದೆ ಎಂದರು.

  ಗುರು ಪರಂಪರೆಗೆ ಸಾಕಷ್ಟು ಹಿತಿಹಾಸ ಇದೆ. ಗುರು ಪರಂಪರೆ, ಯೋಗ, ದಾಸೋಹ ಪದ್ಧತಿಗಳು ಆಚರಣೆಗೆ ಬಂದದ್ದೇ ಭಾರತದಿಂದ. ಇಂದು ಈ ಪರಂಪರೆಯನ್ನು ಇಡೀ ಜಗತ್ತೇ ಅನುಕರಣೆ ಮಾಡುತ್ತಿದೆ. ಬಸವಣ್ಣಾದಿಗಳು ಹೇಳಿದ್ದು ಕಾಯಕವೇ ಕೈಲಾಸ ಅನ್ನೋ ಅದ್ಭುತ ಸಂದೇಶವನ್ನೆ. ನಾವು ಇಂದು ನಡೆದಾಡುವ ದೇವರು, ಆಧುನಿಕ ಬಸವಣ್ಣನವರನ್ನ ಕಳೆದುಕೊಂಡಿದ್ದೇವೆ. ಇದು ಬರಿ ರಾಜ್ಯಕ್ಕೆ ಅಲ್ಲ, ಇಡೀ ದೇಶದ ಆಧ್ಯಾತ್ಮ ಲೋಕಕ್ಕೆ ತುಂಬಲಾರದ ನಷ್ಟ ಎಂದು ರಾಮ್‍ದೇವ್ ಕಂಬನಿ ಮಿಡಿದರು.

  ಸಿದ್ಧಗಂಗಾ ಶ್ರೀಗಳ ಸುದೀರ್ಘ111 ವರ್ಷಗಳ ಚಿಂತನೆ, ಸಾಮಾಜಿಕ ಕಾಳಜಿಗಳು ಮುಂದಿನ ಆಧ್ಯಾತ್ಮ  ಕೈಗನ್ನಡಿ. ಅವರ ಜೀವನವೇ ನಮಗೆ ಆದರ್ಶಪ್ರಾಯವಾದ ಮಾರ್ಗಸೂಚಿ ಎಂದು ಬಾಬಾ ಹೇಳಿದ್ರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link