ಕಚೇರಿ ನವೀಕರಣಕ್ಕೆ 70 ಲಕ್ಷ ಖರ್ಚು ಮಾಡಿದ ಡಿಸಿಎಂ ಪರಮೇಶ್ವರ್

ಬೆಂಗಳೂರು : 

  ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಕೂಡ ಇದೇ ಹಾದಿಯಲ್ಲಿ ನಡೆಯಬೇಕು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡುತ್ತಿದ್ದರೆ, ಡಿಸಿಎಂ ಪರಮೇಶ್ವರ್​ ಮಾತ್ರ   ತಮ್ಮ ಕಚೇರಿಯನ್ನು ಐಷಾರಾಮಿಯಾಗಿ ನವೀಕರಣ ಮಾಡಿರುವುದು ಈಗ ಟೀಕೆಗೆ ಗುರಿಯಾಗಿದೆ.

  ತಮ್ಮ ಕಚೇರಿ ನವೀಕರಣಕ್ಕಾಗಿ ಡಿಸಿಎಂ ಪರಮೇಶ್ವರ್​ ಇದಕ್ಕಾಗಿ 70 ಲಕ್ಷ ಹಣವನ್ನು ದುಂದುವೆಚ್ಚ ಮಾಡಿದ್ದಾರೆ. ವಿಧಾನಸೌಧದ ತಮ್ಮ ಕೊಠಡಿ 327, 328 ಎ ಕೊಠಡಿಯ ತಮ್ಮ ಚೇಬರ್​ ಹಾಗೂ ಆ್ಯಂಟಿ ಚೇಬರ್​ಗೆ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕೊಠಡಿ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಹೊಸ ಕುರ್ಚಿ, ಮೇಜು, ಸೋಫಾ, ಲೈಟ್​ಗಳನ್ನು ಅಳವಡಿಸಲಾಗಿದೆ.

  ಅಷ್ಟೇ ಅಲ್ಲದೇ ಕಚೇರಿಗೆ ಸಂಪೂರ್ಣ ಪಿಒಪಿ ಬಳಸಿ ಒಳವಿನ್ಯಾಸ  ಮಾಡಲಾಗಿದ್ದು, ನಿತ್ಯ ಪೂಜೆಗೆ ಪಂಚಲೋಹದ ಪೂಜಾ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆ. ಡಿಸಿಎಂ ಈ ನಡೆಗೆ ಈಗ ಚರ್ಚೆಗೆ ಗುರಿಯಾಗಿದೆ.

  ಸಿಎಂ ಕುಮಾರಸ್ವಾಮಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಾಗಿ ಸರ್ಕಾರಿ ಕಾರನ್ನು ಬಳಸುತ್ತಿಲ್ಲ. ಅಲ್ಲದೇ ಕಚೇರಿಯಲ್ಲಿ ಗುತ್ತಿಗೆ ನೌಕರರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ಈ ಕುರಿತು ತಮ್ಮ ಸಹೋದ್ಯೋಗಿಗಳಲ್ಲಿಯೂ ಮನವಿ ಮಾಡಿದ್ದರು.  ಆದರೆ, ಡಿಸಿಎಂ ಪರಮೇಶ್ವರ್​ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಹಣ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap