ವಿದ್ಯಾರ್ಥಿನಿ ಮೇಲೆ ರೇಪ್ : ಬಿಜೆಪಿ ನಾಯಕ ಚಿನ್ಮಯಾನಂದಸ್ವಾಮಿ ಅರೆಸ್ಟ್!!​

ಷಹಜಾನಪುರ:

      ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಡಿ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಸ್ವಾಮಿಯನ್ನು ಸ್ಥಳೀಯ ಪೊಲೀಸ್​ ಸಹಯೋಗದೊಂದಿಗೆ ಎಸ್‌ಐಟಿ ಬಂಧಿಸಿದೆ.

      ಸ್ವಾಮಿ ಚಿನ್ಮಯಾನಂದ ವಿರುದ್ಧ ಕಾನೂನು ವಿದ್ಯಾರ್ಥಿನಿ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಲಾಗಿತ್ತು. ಎಸ್‌ಐಟಿ ತಂಡವು ಇಂದು 9 ಗಂಟೆ ಸುಮಾರಿಗೆ ಸ್ವಾಮಿ ಚಿನ್ಮಯಾನಂದ ಅವರನ್ನು ಬಂಧಿಸಿ, ಆಶ್ರಮದಿಂದ ಚೌಕ್ ಕೊತ್ವಾಲ್​​​​​ಗೆ ಕರೆತರಲಾಗಿದೆ.

      ಸ್ಮಾಮಿ ಚಿನ್ಮಯಾನಂದ ಅವರು ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇದೇ ಸಂಸ್ಥೆಯು ಕಾನೂನು ಕಾಲೇಜನ್ನು ಸಹ ನಡೆಸುತ್ತಿದೆ. ಇದೇ ಕಾಲೇಜಿನ ಅವರ ಆಶ್ರಮಕ್ಕೆ ಸೇರಿದ ಹಾಸ್ಟೆಲ್​ನಲ್ಲಿದ್ದ ಯುವತಿ, ಬಾಥ್ ರೂಮಿನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆ ವಿಡಿಯೋ ಕ್ಲಿಪಿಂಗ್​ಗಳನ್ನ ಇಟ್ಟುಕೊಂಡು ಚಿನ್ಮಯಾನಂದರು ಆ ಯುವತಿಗೆ ಬ್ಲ್ಯಾಕ್​ಮೇಲ್ ಮಾಡಿ ಅತ್ಯಾಚಾರ ಎಸಗುತ್ತಾರೆನ್ನಲಾಗಿದೆ. ಬಿಜೆಪಿ ನಾಯಕ ಅದೇ ವಿಡಿಯೋಗಳನ್ನ ಇಟ್ಟುಕೊಂಡೇ ಒಂದು ವರ್ಷ ಕಾಲ ಆ ಯುವತಿಯನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಯುವತಿಯು ಸ್ವಾಮಿ ಚಿನ್ಮಯಾನಂದರ ಕೃತ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸುತ್ತಾರೆ. ಈ ವಿಡಿಯೋವನ್ನು ಆಗಸ್ಟ್ 23ರಂದು ಹಂಚಿಕೊಂಡು ತಮಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದರು.

      ಆದರೆ, ಮರುದಿನದಿಂದಲೇ ಯುವತಿ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಮುನ್ನ, ‘ಸಂತರೊಬ್ಬರು ನನಗೆ ಕಿರುಕುಳ ನೀಡುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎನ್ನುವ ಸಂದೇಶವುಳ್ಳ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು.

Related image

      ನಂತರ ವಿದ್ಯಾರ್ನಿಯ ಪೋಷಕರು ಸ್ಮಾಮಿ ಚಿನ್ಮಯಾನಂದ ವಿರುದ್ಧ ದೂರು ದಾಖಲಿಸಿದ್ದರು. ಉತ್ತರಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಚಿನ್ಮಯಾನಂದ ಬೆಂಬಲಿಗರಿಂದ ಯುವತಿ ಕುಟುಂಬಕ್ಕೆ ಬೆದರಿಕೆ ಕರೆಗಳು ಬರತೊಡಗಿದ್ದವು.

      ರಾಜಸ್ತಾನದಲ್ಲಿ ಪತ್ತೆಯಾಗಿದ್ದ ಆ ವಿದ್ಯಾರ್ಥಿನಿ ಕಳೆದ ವಾರ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಸ್ವಾಮಿ ಚಿನ್ಮಯಾನಂದ ಅವರನ್ನು ತಕ್ಷಣವೇ ಬಂಧಿಸದೇ ಇದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬುಧವಾರ ಬೆದರಿಕೆ ಹಾಕಿದ್ದರು.

      ಇದಕ್ಕೆ ಪ್ರತಿಯಾಗಿ ಚಿನ್ಮಯಾನಂದ ಅವರ ಬೆಂಬಲಿಗರು ಪ್ರತಿದೂರು ಸಲ್ಲಿಸಿದ್ದಾರೆ. ತಮಗೆ ಐದು ಕೋಟಿ ರೂಪಾಯಿ ಕೊಡುವಂತೆ ಚಿನ್ಮಯಾನಂದ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು ಎಂದು ಅವರು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

      

Recent Articles

spot_img

Related Stories

Share via
Copy link
Powered by Social Snap