ಲಾಹೋರ್ ನಲ್ಲಿ ಬಾಂಬ್ ಸ್ಫೋಟ : 4 ಸಾವು!!

ಕರಾಚಿ:

       ಪಾಕಿಸ್ತಾನದ ಲಾಹೋರ್ ನ ಪ್ರಸಿದ್ಧ ದಾಟಾ ದರ್ಬಾರ್ ಹೊರಗಡೆ ಬಾಂಬ್ ಸ್ಫೋಟಗೊಂಡ ಪರಿಣಾಮ 4 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

      ದತ್ತಾ ದರ್ಬಾರ್​ ಮಸೀದಿ ಹೊರಗಡೆ ಸಾಗುತ್ತಿದ್ದ ಪೊಲೀಸ್​ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಪಂಜಾಬ್​ ಪ್ರಾಂತ್ಯದಲ್ಲಿರುವ ಮಸೀದಿಯ ಎರಡನೇ ಗೇಟ್​ ಬಳಿ ಎರಡು ಪೊಲೀಸ್ ವಾಹನಗಳ ಹತ್ತಿರವೇ ಈ ದಾಳಿ ನಡೆದಿದೆ.

      ದಾಳಿಯಲ್ಲಿ ಮೂವರು ಪೊಲೀಸ್​ ಅಧಿಕಾರಿಗಳು​ ಹಾಗೂ ಸಾಮಾನ್ಯ ಜನರೊಬ್ಬರು ಸಾವನ್ನಪ್ಪಿದ್ದಾರೆ. 24 ಜನ ಗಂಭೀರವಾಗಿ ಗಾಯಗೊಂಡಿದ್ದು, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.

      ಸ್ಫೋಟ ಸಂಭವಿಸಿದಾಗ ನೂರಾರು ಯಾತ್ರಿಕರು ಡಾಟಾ ದರ್ಬಾರ್ ದೇವಾಲಯದ ಒಳಗೆ ಮತ್ತು ಹೊರಗಡೆ ಇದ್ದರು. ರಂಜಾನ್ ಹಬ್ಬದ ಉಪವಾಸ ನಡೆಯುತ್ತಿರುವುದರಿಂದ ಯಾತ್ರಿಕರು ಈ ಸಮಯದಲ್ಲಿ ಡಾಟಾ ದರ್ಬಾರ್ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

      ಇದೇ ದರ್ಗಾವನ್ನು ಗುರಿಯಾಗಿರಿಸಿಕೊಂಡು 2010 ರಲ್ಲಿ ದಾಳಿ ನಡೆಸಲಾಗಿತ್ತು, 40 ಮಂದಿ ಸಾವನ್ನಪ್ಪಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap