ಐಶ್ವರ್ಯಾ ರೈ, ಪುತ್ರಿಗೂ ಕೊರೊನಾ ; ಅಮಿತಾಭ್ ಮನೆ ಸೀಲ್​​ಡೌನ್!!

ಮುಂಬೈ : 

     ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಅವರ ನಿವಾಸ ತಲುಪಿರುವ ಬಿಎಂಸಿ ಸಿಬ್ಬಂದಿ ವಾಸವಿದ್ದ ಬಂಗಲೆಯನ್ನು ಸೀಲ್‌ ಡೌನ್‌ ಮಾಡಿದ್ದು, ಸ್ಯಾನಿಟೈಸ್‌ ಪ್ರಕ್ರಿಯೆ ಶುರು ಮಾಡಿದ್ದಾರೆ. 

     ಕಳೆದ ನಿನ್ನೆ ಬಾಲಿವುಡ್ ಬಿಗ್ ಬೀ ಅಮಿತಬ್ ಬಚ್ಚನ್ ಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿತ್ತು. ಹೀಗಾಗಿ ಅವರು ಕ್ವಾರಂಟೈನ್ ನಲ್ಲಿರುವುದಾಗಿ ಖಾಸಗೀ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದರು. ಈ ಬಳಿಕ ಕುಟುಂಬದ ಎಲ್ಲರೂ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದರು.

     ಇವರೆಲ್ಲರ ಮೊದಲ ಕೊರೋನಾ ಪರೀಕ್ಷೆಯ ವರದಿಯಲ್ಲಿ ಕೊರೋನಾ ನೆಗೆಟಿವ್ ಎಂಬುದಾಗಿ ಬಂದಿತ್ತು. ಹೀಗಾಗಿ ಬಚ್ಚನ್ ಫ್ಯಾಮಿಲಿಯ ನಟಿ ಐಶ್ವರ್ಯ ರೈ, ಮಗಳು ಆರಾಧ್ಯ ಹಾಗೂ ಜಯಾ ಬಚ್ಚನ್ ನಿಟ್ಟುಸಿರು ಬಿಡುವಂತಾಗಿತ್ತು.

      ಆದರೆ ಮತ್ತೆ ಎರಡನೇ ಬಾರಿ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ, ಈ ಕೊರೋನಾ ವರದಿ ಬಂದಿದ್ದು, ಜಯಾ ಬಚ್ಚನ್ ವರದಿ ಕೊರೋನಾ ನೆಗೆಟಿವ್ ಎಂಬುದಾಗಿದ್ದರೇ, ಅಭಿಷೇಕ್ ಬಚ್ಚನ್ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap