ಕೇಂದ್ರ ಬಜೆಟ್ : 73 ವರ್ಷಗಳ ‘ಬ್ರೀಫ್ ಕೇಸ್’ ಸಂಪ್ರದಾಯಕ್ಕೆ ಬ್ರೇಕ್!!

ನವದೆಹಲಿ :

     ಪ್ರತಿ ಬಾರಿಯೂ ಹಳೆಯ ಸಂಪ್ರದಾಯವನ್ನು ಮುರಿಯುವ ಮತ್ತು ಹೊಸ ಸಂಪ್ರದಾಯವನ್ನು ಆರಂಭಿಸುವ ನಡೆಯನ್ನು ನಿರ್ಮಲಾ ಅನುಸರಿಸಿಕೊಂಡು ಬಂದಿದ್ದು, ಈ ಬಾರಿ 73 ವರ್ಷಗಳ ‘ಬ್ರೀಫ್ ಕೇಸ್’ ಸಂಪ್ರದಾಯಕ್ಕೆ ತೆರೆ ಎಳೆದಿದ್ದಾರೆ.

     ಕಳೆದ ಎರಡು ವರ್ಷಗಳಿಂದ ಅವರು ಬಜೆಟ್ ಪತ್ರಗಳನ್ನು ಒಳಗೊಂಡ ಬೃಹತ್ ಸೂಟ್‌ಕೇಸ್ ಹೊತ್ತು ತರುವ ಬದಲು, ರಾಷ್ಟ್ರೀಯ ಸಂಕೇತ ಅಶೋಕ ಸ್ತಂಬದ ಚಿತ್ರವುಳ್ಳ ಕೆಂಪು ಬಣ್ಣದ ‘ಬಹಿ ಖಾತಾ’ದ ಕಡತ ತಂದು ಅದರಲ್ಲಿ ಬಜೆಟ್ ಮಂಡಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ 73 ವರ್ಷಗಳ ಸಂಪ್ರದಾಯವೊಂದನ್ನು ಕೈಬಿಡಲಾಗಿದೆ.

      ಇದೇ ಪ್ರಥಮ ಸಲ ಕೇಂದ್ರ ಬಜೆಟ್ ಸಂಪೂರ್ಣ ಕಾಗದ ರಹಿತವಾಗುತ್ತಿದೆ. ಅಂದರೆ, 2021-22ನೇ ಸಾಲಿನ ಬಜೆಟ್‌ ಅನ್ನು ಕಾಗದಗಳಲ್ಲಿ ಮುದ್ರಣ ಮಾಡಿಲ್ಲ.  ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಗ್ಯಾಡ್ಜೆಟ್‌ನಲ್ಲಿ ಸಂಪೂರ್ಣ ಬಜೆಟ್ ಪ್ರತಿಯನ್ನು ಅಡಕ ಮಾಡಲಾಗಿದೆ. 

ಮೊಬೈಲ್​ ಆಯಪ್​ನಲ್ಲಿ ಬಜೆಟ್​ ಪ್ರತಿ :

Budget 2021: All you need to know about 'Union Budget Mobile App' that gives complete access to 14 Union Budget documents | Zee Business

     ಸಾರ್ವಜನಿಕರೂ ಯೂನಿಯನ್ ಬಜೆಟ್ ಮೊಬೈಲ್ ಆಪ್ ಮೂಲಕ ಬಜೆಟ್ ಪ್ರತಿಯನ್ನು ಪಡೆಯಬಹುದಾಗಿದೆ. ಆಪ್​ನಲ್ಲಿ ಮುಂಗಡ ಪತ್ರದ 14 ದಾಖಲೆಗಳ ಪಿಡಿಎಫ್ ಪ್ರತಿ ಲಭ್ಯವಿರುತ್ತದೆ. ಇದರಲ್ಲಿ ಮುಂಗಡಪತ್ರದ ಭಾಷಣ ಮತ್ತು ಇತರೆ ದಾಖಲೆಗಳು ಸೇರಿಕೊಂಡಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಆಯಪ್​ ಲಭ್ಯವಿದೆ. ಆಯಪ್​ ಬಳಕೆದಾರ ಸ್ನೇಹಿಯಾಗಿದ್ದು, ಬಜೆಟ್ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು, ಝುೂಮ್ ಮಾಡಿ ನೋಡಬಹುದು ಮತ್ತು ಪ್ರಿಂಟ್ ಕೂಡ ಮಾಡಬಹುದಾಗಿದೆ. ಹುಡುಕುವುದಕ್ಕೆ ಸರ್ಚ್ ಆಯ್ಕೆಯನ್ನೂ ಒದಗಿಸಲಾಗಿದೆ. ಆಯಪ್​ ಆಂಡ್ರಾಯ್ಡ್​ ಮತ್ತು ಐಒಎಸ್ ಮಾದರಿಯಲ್ಲೂ ಲಭ್ಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap