ದೆಹಲಿ:

ತರಬೇತಿ ವಿಮಾನ ಖರೀದಿಯಲ್ಲಿ ದೊಡ್ಡ ಮಟ್ಟದ ಕಿಕ್ ಬ್ಯಾಕ್(ಲಂಚ) ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಭಾರತೀಯ ವಾಯುಸೇನೆಯ ಅಧಿಕಾರಿಗಳ ವಿರುದ್ಧ ಚಾರ್ಚ್ ಶೀಟ್ ದಾಖಲಿಸಿದ್ದಾರೆ.
ಶುಕ್ರವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ದೆಹಲಿಯಲ್ಲಿನ ಭಂಡಾರಿ ಮಾಲೀಕತ್ವದ ಆಸ್ತಿಗಳ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಮತ್ತು ಸ್ವಿಜ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಪೈಲಟಸ್ ಏರ್‌ಕ್ರಾಫ್ಟ್ ಲಿಮಿಟೆಡ್‌ನ ಅಧಿಕಾರಿಗಳನ್ನೂ ಪ್ರಕರಣದಲ್ಲಿ ದೋಷಿಗಳೆಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಮೂಲಗಳ ಪ್ರಕಾರ, ಸ್ವಿಡ್ಜರ್ಲೆಂಡ್ ಮೂಲದ ಕಂಪನಿಯಿಂದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು 75 ತರಬೇತಿ ವಿಮಾನಗಳನ್ನು ಖರೀದಿಸಿದ ಪ್ರಕರಣದಲ್ಲಿ ಸುಮಾರು 339 ಕೋಟಿ ರೂ. ಲಂಚ (ಕಿಕ್‌ಬ್ಯಾಕ್) ಪಡೆದ ಆರೋಪದ ಮೇಲೆ ವಾಯುಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ಚಾಕ್ಜ್ ಶೀಟ್ ಕೂಡ ದಾಖಲಿಸಿದೆ ಎಂದು ತಿಳಿದುಬಂದಿದೆ.
2009ರಲ್ಲಿ ತರಬೇತಿ ವಿಮಾನ ವೇಳೆ ಅಕ್ರಮ ವ್ಯವಹಾರ ನಡೆಸಿದ್ದು, ಈ ಸಂಬಂಧ 2016ರಲ್ಲಿ ಸಂಸ್ಥೆ ಪ್ರಾಥಮಿಕ ತನಿಖೆ ಆರಂಭಿಸಿತ್ತು. 75 ತರಬೇತಿ ವಿಮಾನ ಖರೀದಿ ವ್ಯವಹಾರದ ವೇಳೆ ಕಿಕ್ ಬ್ಯಾಕ್ ಪ್ರಸ್ತಾಪವನ್ನು ಮುಂದಿಟ್ಟಿರುವುದು ತನಿಖೆ ವೇಳೆ ಬಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








