ಹೊಸದಿಲ್ಲಿ:
ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 12ನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಶೇ 83.4 ಮಂದಿ ತೇರ್ಗಡೆಯಾಗಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್ಇ) 12ನೇ ತರಗತಿಯ ಫಲಿತಾಂಶವು ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ – cbse.nic.in ನಲ್ಲಿ ಲಭ್ಯವಿದ್ದು, ಫಲಿತಾಂಶವನ್ನು ನೋಡಬಹುದಾಗಿದೆ.
ಪ್ರಾಂತ್ಯವಾರು ಫಲಿತಾಂಶದಂತೆ, ತಿರುವನಂತಪುರಂ ಶೇ.98.2 ಉತ್ತೀರ್ಣತೆಯ ಮೂಲಕ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಶೇ.92.93 ಹಾಗೂ ದಿಲ್ಲಿ ಶೇ.91.87 ಇದೆ. ಅಂತರ್ ರಾಷ್ಟ್ರೀಯ ಶಾಲೆಗಳಲ್ಲಿ ಶೇ.95.43ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಶೇ. 9ರಷ್ಟು ಮೇಲುಗೈ ಸಾಧಿಸಿದ್ದಾರೆ. ಶೇ. 88.70 ಬಾಲಕಿಯರು, ಶೇ. 83.3 ತೃತೀಯ ಲಿಂಗಿಗಳು ಮತ್ತು ಶೇ.79.4 ಮಂದಿ ಬಾಲಕರು ಉತ್ತೀರ್ಣರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
