ನವದೆಹಲಿ :
ಕರೊನಾ ಹಿನ್ನೆಲೆ ವಿದೇಶ ಪ್ರಯಾಣಕ್ಕೆ ಹಾಕಲಾಗಿದ್ದ ನಿರ್ಬಂಧಗಳನ್ನ ಕೊಂಚ ಸಡಿಲಿಸಿರುವ ಕೇಂದ್ರ ಗೃಹ ಇಲಾಖೆ ವಿದೇಶಗರಿಗೆ ಭಾರತಕ್ಕೆ ಬರಲು ಅನುಮತಿ ನೀಡಿದೆ.
ಭಾರತದ ಸಾಗರೋತ್ತರ ನಾಗರಿಕರು(OCI), ಭಾರತ ಮೂಲದ ವ್ಯಕ್ತಿಗಳು(PIO) ಹಾಗೂ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾ ಹೊರತಾಗಿ ಬೇರೆ ಉದ್ದೇಶಗಳಿಗೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ. ಆದರೆ ಪ್ರವಾಸಿ ಉದ್ದೇಶದಿಂದ ಬರುವವರಿಗೆ ಮಾತ್ರ ಈಗಲೂ ನಿರ್ಬಂಧ ಮುಂದುವರಿಯಲಿದೆ.
ಹೀಗಾಗಿ ಪ್ರವಾಸಿ ಉದ್ದೇಶವೊಂದನ್ನ ಹೊರತುಪಡಿಸಿ ಉಳಿದ ಯಾವುದೇ ಯೋಗ್ಯ ಉದ್ದೇಶಕ್ಕಾಗಿ ಪಿಐಒ ಹಾಗೂ ಒಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಪ್ರವಾಸ ಮಾಡಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ