ನವದೆಹಲಿ :
ಮೊದಲ ಹಂತದಲ್ಲಿ 3 ಕೋಟಿ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆಗಿನ ವೀಡಿಯೋ ಕಾನ್ಫೆರೆನ್ಸ್ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಅಭಿಯಾನ ದೇಶದಲ್ಲಿ ಆರಂಭಗೊಂಡಿದೆ. ಕೊರೋನಾ ಲಸಿಕೆಯ ಬಗೆಗಿನ ಡೇಟಾ ಕೋವಿನ್ ನಲ್ಲಿ ಲಭ್ಯವಾಗಲಿದೆ. ಮೊದಲ ಡೋಸ್ ಬಳಿಕ ಪ್ರಾಥಮಿಕ ಸರ್ಟಿಫಿಕೇಟ್ ನೀಡಲಾಗುತ್ತದೆ. ವ್ಯಾಕ್ಸಿನ್ ಕುರಿತಂತ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಮೊದಲ ಹಂತದಲ್ಲೇ 3 ಕೋಟಿ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂಬುದಾಗಿ ಘೋಷಿಸಿದ್ದಾರೆ.
ಅಗತ್ಯವಿರುವವರಿಗೆ ಲಸಿಕೆ ತಲುಪಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಅದರಲ್ಲೂ ಕೊರೋನಾ ವಾರಿಯರ್ಸ್ ಗೆ ನಮ್ಮ ಮೊದಲ ಆದ್ಯತೆ. ಲಸಿಕೆ ವಿತರಣೆಗೆ ಮೂಲ ಸೌಕರ್ಯ ಸಿದ್ಧಗೊಂಡಿದೆ. ಡ್ರೈ ರನ್ ನಮ್ಮ ಕ್ಷಮತೆಯನ್ನು ತೋರಿಸುತ್ತದೆ. ಮೊದಲ ಹಂತದಲ್ಲಿ 3 ಕೋಟಿ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತದ ಬೃಹತ್ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಪೂರ್ವಭಾವಿಯಾಗಿ, ಕೇಂದ್ರ ಸರ್ಕಾರವು ಸೋಮವಾರ, ಭಾರತದ ಸ್ಥಳೀಯವಾಗಿ ತಯಾರಿಸಲಾದ ಆಕ್ಸ್ ಫರ್ಡ್ ಕೋವಿಡ್-19 ಲಸಿಕೆ ‘ಕೋವಿಶೀಲ್ಡ್’ ಅನ್ನು ಎಚ್ ಎಲ್ ಎಲ್ ಕೇರ್ ಮೂಲಕ 11 ಮಿಲಿಯನ್ ಡೋಸ್ ಗಳನ್ನು ಖರೀದಿಸಲು ಮುಂದಾಗಿದೆ ಎಂಬುದಾಗಿ ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೇ ಲಸಿಕೆ ರವಾನೆಗಳು ಇಂದು ಸಂಜೆವೇಳೆಗೆ ಆರಂಭವಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಘಟಕದಿಂದ ಕೋವಿಶೀಲ್ಡ್ ಲಸಿಕೆಯನ್ನು ಜನವರಿ 11ರ ಸಂಜೆಯಿಂದ ಅಥವಾ ಜನವರಿ 12ರಂದು ಸಾಗಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಮುಂದಿನ ಆರರಿಂದ ಎಂಟು ತಿಂಗಳ ಅವಧಿಯಲ್ಲಿ 300 ಮಿಲಿಯನ್ ನಾಗರಿಕರನ್ನು ಒಳತರುವ ಗುರಿ ಹೊಂದಿರುವ ದೇಶದ ಲಸಿಕೆ ಅಭಿಯಾನಕ್ಕೆ 600 ಮಿಲಿಯನ್ ಡೋಸ್ʼಗಳನ್ನು ಪಡೆಯುವ ಗುರಿಯನ್ನ ಸರ್ಕಾರ ಹೊಂದಿದೆ.
‘ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಭಾರತ ಸರ್ಕಾರದಿಂದ ಖರೀದಿ ಆದೇಶ ಪಡೆದಿದೆ’ ಎಂದು ಎಸ್ ಐಐ ಅಧಿಕಾರಿಗಳು ತಿಳಿಸಿದ್ದು, ಈ ಲಸಿಕೆಯುಪ್ರತಿ ಡೋಸ್ʼಗೆ ಸುಮಾರು 200 ರೂಪಾಯಿ ವೆಚ್ಚ ತಗುಲಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ