ಆರ್ ಬಿಐ ಮೋದಿ ಸರ್ಕಾರದ ವಶವಾದರೆ ದೇಶಕ್ಕೆ ವಿನಾಶಕಾರಿ : ಆರೋಪ

 ದೆಹಲಿ:

      ಮೋದಿ ಸರಕಾರವೇನಾದರು ಆರ್‌ಬಿಐ ಅನ್ನು ತನ್ನ ವಶಕ್ಕೆ ತೆಗೆದುಕೊಂಡದ್ದೇ ಆದಲ್ಲಿ ಅದು ದೇಶಕ್ಕೆ ಮತ್ತು ದೇಶದ ಆರ್ಥಿಕತೆಗೆ ವಿನಾಶಕಾರಿಯಾದೀತು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಎಚ್ಚರಿಸಿದ್ದಾರೆ.

      ಕೇಂದ್ರದಲ್ಲಿನ ಮೋದಿ ಸರಕಾರ 2019ರ ಲೋಕಸಭಾ ಚುನಾವಣೆಗೆ ಮುನ್ನ ಭಾರತೀಯ ರಿಸರ್ವ್‌ ಬ್ಯಾಂಕನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

      ”ಕೇಂದ್ರ ಸರಕಾರ ಈ ಹಿಂದೆ ಯಾವತ್ತೂ ಸಾರ್ವಜನಿಕ ಮತ್ತು ಆರ್ಥಿಕತೆ ಹಿತಾಸಕ್ತಿ ಕಾಪಿಡುವ ನೆಪದಲ್ಲಿ ಆರ್‌ಬಿಐ ಗೆ ನಿರ್ದೇಶನ ನೀಡುವ ತನ್ನ ಕಾನೂನು ಅಧಿಕಾರವನ್ನು ಪ್ರಯೋಗಿಸಿದ್ದೇ ಇಲ್ಲ; ಈಗ ಮೋದಿ ಸರಕಾರ ಅದನ್ನು ಮಾಡುತ್ತಿದೆ ಎಂದು ಚಿದಂಬರಂ ಟೀಕಿಸಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ