ರೆಡ್ಡಿಯ ಬಳಿ ಕ್ಷಮೆ ಕೇಳಿದ ರೆಡ್ಡಿ ಪರ ವಕೀಲ!!!

ಬೆಂಗಳೂರು:

          ಅಂಬಿಡೆಂಟ್ ಕಂಪನಿಯ 20 ಕೋಟಿ ರೂ. ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿಯಾಗಿ ಖೆಡ್ಡಾ ತೋಡಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಕೊನೆಗೂ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಸಫಲರಾಗಿದ್ದಾರೆ.

        ಸಿಸಿಬಿ ಪೊಲೀಸರು 1ನೇ ಏಸಿಎಂಎಂ ನ್ಯಾಯಾಲಯದ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರ ಮುಂದೆ ಜನಾರ್ದನ ರೆಡ್ಡಿ ಅವರನ್ನು ಹಾಜರುಪಡಿಸಿದ್ದು, ನ್ಯಾಯಾಲಯ ಈ ತಿಂಗಳ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಂತರ ರೆಡ್ಡಿ ಅವರನ್ನು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸೇರಿಸಿದರು.

        ಶನಿವಾರ ಮಧ್ಯಾಹ್ನ ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಜನಾರ್ಧನ ರೆಡ್ಡಿ ಅವರನ್ನು ಮಧ್ಯರಾತ್ರಿ 2.30ರವರೆಗೆ ವಿಚಾರಣೆ ನಡೆಸಿ ಮತ್ತೆ ಭಾನುವಾರ ಬೆಳಿಗ್ಗೆ ವಿಚಾರಣೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಬಂಧಿಸಿದ್ದಾರೆ.

        ಆಂಬಿಡೆಂಟ್ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪಾತ್ರ ಕಂಡುಬಂದಿರುವುದಿಂದ ಅವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

         ರೆಡ್ಡಿ ಬಂಧನದ ನಂತರ ಮಾತನಾಡಿದ ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಅವರು ಶನಿವಾರ ಮಧ್ಯಾಹ್ನ ಸಿಸಿಬಿ ಕಚೇರಿಗೆ ತಮ್ಮ ವಕೀಲರೊಂದಿಗೆ ಆಗಮಿಸಿದ್ದರು. ಈ ವೇಳೆ ತನಿಖಾಧಿಕಾರಿಗಳು ಅವರನ್ನು ಸವಿಸ್ತಾರವಾಗಿ ವಿಚಾರಣೆ ನಡೆಸಿದ್ದರು. ಅಲ್ಲದೇ ತಡರಾತ್ರಿಯವರೆಗೂ ಸಹ ವಿಚಾರಣೆ ಮುಂದುವರೆದಿತ್ತು. ಪ್ರಕರಣದಲ್ಲಿ ರೆಡ್ಡಿಯವರು 20 ಕೋಟಿ ರೂಪಾಯಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿದ್ದರ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದೇವೆಂದು ತಿಳಿಸಿದರು.

ತಮ್ಮ ಪರ ವಕೀಲರ ವಿರುದ್ಧ ಹರಿಹಾಯ್ದ ರೆಡ್ಡಿ:
          ಪೊಲೀಸರು ರೆಡ್ಡಿ ಗಾಗಿ ಹುಡುಕಾಟ ನಡೆಸುತ್ತಿರುವಾಗ, ತಾವು ನಾಪತ್ತೆಯಾಗಿಲ್ಲ ಎಂಬ ವಿಡಿಯೋ ಮಾಡಿ ರೆಡ್ಡಿ ಮೀಡಿಯಾ ಹೌಸ್ ಗಳಿಗೆ ಕಳುಹಿಸಿ ತಾವು ಬೆಂಗಳೂರಿನಲ್ಲಿಯೇ ಇರುವುದಾಗಿ ತಿಳಿಸಿದ್ದರು, ಜೊತೆಗೆ ತಾವು ಪೊಲೀಸರು ಮತ್ತು ಕೋರ್ಟ್ ಮುಂದೆ ಹಾಜರಾಗುವುದಾಗಿ ತಿಳಿಸಿದ್ದರು, ಇದೆಲ್ಲಾವನ್ನು ರೆಡ್ಡಿ ತಮ್ಮ ಪರ ವಕೀಲರ ಸಲಹೆಯಂತೆ ಮಾಡಿದ್ದರು. 
         ಆದರೆ ಭಾನುವಾರ ಬೆಳಗ್ಗೆ ತಮ್ಮ ಬಂಧನ ಖಚಿತವಾಗುತ್ತಿದ್ದಂತೆ ತಾವು ವಕೀಲರ ಮಾತು ಕೇಳಿ ತಪ್ಪು ಮಾಡಿದ್ದೆ ಎಂದು ರೆಡ್ಡಿಗೆ ತಿಳಿದು ಬಂದಿದೆ.
       ತಮ್ಮನ್ನು ಬಂಧಿಸಲಾಗುತ್ತದೆ ಎಂಬ ವಿಷಯವನ್ನು ತಿಳಿಯುತ್ತಿದ್ದಂತೆಯೇ ರೆಡ್ಡಿ ಮಾನಸಿಕವಾಗಿ ತುಂಬಾ ವಿಚಲಿತರಾಗಿದ್ದರು, ಅಲ್ಲಿಯವರೆಗೂ ವಕೀಲರ ಮಾತನ್ನು ಶಾಂತವಾಗಿ ಕೇಳುತ್ತಿದ್ದ ರೆಡ್ಡಿ ಏಕಾಏಕಿ ವಕೀಲರನ್ನು ಬೈಯ್ಯ ತೊಡಗಿದರು. ರೆಡ್ಡಿ ಮನವೊಲಿಸಲು ಪ್ರಯತ್ನಿಸುತ್ತಿದ್ದ ವಕೀಲರ ಮಾತು ಕೇಳುವ ಮೂಡ್ ನಲ್ಲಿ ರೆಡ್ಡಿ ಇರಲಿಲ್ಲ, ಪೊಲೀಸರ ಬಳಿ ದೊಡ್ಡ ಸಾಕ್ಷಿ ಇದೆ ಎಂಬ ಬಗ್ಗೆ ತಮಗೂ ಮಾಹಿತಿಯಿರಲಿಲ್ಲ ಎಂದು ವಕೀಲರು ಹೇಳಿ ಅವರ ಬಳಿ ಕ್ಷಮೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
         ಒಂದು ವೇಳೆ ರೆಡ್ಡಿ ನಮ್ಮ ಮುಂದೆ ಹಾಜರಾಗದಿದ್ದರೇ ಕೊರ್ಟ್ ನಿಂದ ರಿಲೀಫ್ ಪಡೆದುಕೊಳ್ಳಲು ಸಮಯ ಸಿಗುತ್ತಿತ್ತು. ಅವರ ವಿರುದ್ದ ಸಂಗ್ರಹವಾಗಿರುವ ಸಾಕ್ಷ್ಯದ ಬಗ್ಗೆ ಅರಿವಿಲ್ಲದೇ  ರೆಡ್ಡಿ ತಮ್ಮ ಮುಂದೆ ಹಾಜರಾಗಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
          ರೆಡ್ಡಿಯ ಜೊತೆ ಅವರ ಆಪ್ತ ಆಲಿಖಾನ್ ನನ್ನು ಸಹ ಬಂಧನ ಮಾಡಿದ್ದೇವೆ. ಸಂಪೂರ್ಣ ತನಿಖೆಯ ನಂತರ ಅವರಿಂದ ಹಣವನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ. ಅಲ್ಲದೇ ಆಂಬಿಡೆಂಟ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದವರಿಗೆ ಅದನ್ನು ಮರಳಿಸುತ್ತೇವೆ ಎಂದು ಹೇಳಿದರು.

 

        ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಅವರು ಶನಿವಾರ ಮಧ್ಯಾಹ್ನ ಸಿಸಿಬಿ ಕಚೇರಿಗೆ ತಮ್ಮ ವಕೀಲರೊಂದಿಗೆ ಆಗಮಿಸಿದ್ದರು. ಈ ವೇಳೆ ತನಿಖಾಧಿಕಾರಿಗಳು ಅವರನ್ನು ಸವಿಸ್ತಾರವಾಗಿ ವಿಚಾರಣೆ ನಡೆಸಿದ್ದರು. ಅಲ್ಲದೇ ತಡರಾತ್ರಿಯವರೆಗೂ ಸಹ ವಿಚಾರಣೆ ಮುಂದುವರೆದಿತ್ತು. ಪ್ರಕರಣದಲ್ಲಿ ರೆಡ್ಡಿಯವರು 20 ಕೋಟಿ ರೂಪಾಯಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿದ್ದರ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದೇವೆಂದು ತಿಳಿಸಿದರು.

      ರೆಡ್ಡಿ ಅವರನ್ನು ಆಂಬಿಡೆಂಟ್ ಕಂಪನಿಯ ಡೀಲ್ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಠಿ, ವಂಚನೆ ಸೇರಿದಂತೆ ಸೆಕ್ಷನ್ 368, 371, 420, ಐಪಿಸಿ 120 ಪ್ರಕರಣಗಳ ಅಡಿ ರೆಡ್ಡಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದ್ದು, ನಾಳೆಯೊಳಗೆ ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

       ಸಿಸಿಬಿ ಕೇಂದ್ರ ಕಚೇರಿಗೆ ನಿನ್ನೆ ಮಧ್ಯಾಹ್ನ 4 ರ ವೇಳೆ ವಿಚಾರಣೆಗೆ ಹಾಜರಾದ ಜನಾರ್ಧನ ರೆಡ್ಡಿ ಅವರನ್ನು ಮಧ್ಯ ರಾತ್ರಿ 2.30ರವರೆಗೆ ವಿಚಾರಣೆ ನಡೆಸಲಾಯಿತು. ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣ ಸಂಬಂಧ ಪಟ್ಟಿ ಮಾಡಿದ ಪ್ರಶ್ನೆಗಳಿಗೆ ರೆಡ್ಡಿಯಿಂದ ಹೇಳಿಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ರೆಡ್ಡಿ ಆರೋಪಿ ಫರೀದ್ ಅವರನ್ನು ಕಳೆದ ಜನವರಿಯಲ್ಲಿ ನನಗೆ ಪರಿಚಯ ಮಾಡಿಸಲಾಯಿತು. ಈ ವೇಳೆ ಅವರು ನನ್ನೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಅದಾದ ನಂತರ ಭೇಟಿ ಯಾಗಿರಲಿಲ್ಲ. ವ್ಯಕ್ತಿಗತವಾಗಲಿ ವ್ಯವಹಾರ ಇಟ್ಟುಕೊಂಡಿರಲಿಲ್ಲವೆಂದು ಹೇಳಿಕೆ ನೀಡಿದ್ದರು.

      ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ನಾನು ಕೊಠಡಿಯೊಂದನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದ್ದೇನೆ. ಆ ಕೊಠಡಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ಒಂದು ದಿನ ಉಳಿದುಕೊಂಡಿದಾಗ ನನ್ನ ಆಪ್ತ ಸಹಾಯಕನನ್ನು ಸಂಪರ್ಕಿಸಿದ ಫರೀದ್ ಅವರ ಸ್ನೇಹಿತ ಭ್ರಿಜೇಶ್ ರೆಡ್ಡಿ ಹಾಗೂ ಅವರ ಪುತ್ರ ಅಫಕ್ ಹೋಟೇಲ್‍ಗೆ ಬಂದರು. ನನ್ನನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿ ಸನ್ಮಾನ ಮಾಡಿ ತೆಗೆಸಿಕೊಂಡಿದ್ದ ಫೆÇೀಟೋಗಳನ್ನು ತಿರುಚಿ ಡೀಲ್ ಕಥೆ ಕಟ್ಟಲಾಗಿದೆ ಎಂದು ರೆಡ್ಡಿ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದರು.

       ವಂಚನೆ ಪ್ರಕರಣದ ಸಂಬಂಧ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಆಲಿಖಾನ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಅವರಿಬ್ಬರ ಹೇಳಿಕೆಯಲ್ಲಿ ಗೊಂದಲವಿದ್ದರಿಂದ ಪ್ರಕರಣದ ಮತ್ತೊಬ್ಬ ಆರೋಪಿ ಫರೀದ್ ನನ್ನು ಕರೆಯಿಸಿ ಮೂವರನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಿದ್ದರು.

       ಆಂಬಿಡೆಂಟ್ ಕಂಪನಿಯ ವಿರುದ್ಧ ವಂಚನೆ ಪ್ರಕರಣದ ತನಿಖೆಯಲ್ಲಿ ಇಡೀ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಫರೀದ್ ಅವರಿಂದ 20 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಪಡೆದ ಬಗ್ಗೆಯು ಅಧಿಕಾರಿಗಳು ಮೂವರನ್ನು ಪ್ರಶ್ನಿಸಿ ಎಲ್ಲವನ್ನು ಚಿತ್ರೀಸಿಕೊಂಡರು. ಡೀಲ್ ಪ್ರಕರಣದಲ್ಲಿ ಮಧ್ಯವರ್ತಿ ಬ್ರಿಜೇಶ್ ರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದ ಅಧಿಕಾರಿಗಳು ರೆಡ್ಡಿ ಅವರನ್ನು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap