ರಾಯಪುರ:
ಛತ್ತೀಸ್ಗಢದ ಬಿಜಾಪುರದಲ್ಲಿ ಮಾವೋವಾದಿಗಳು ಐಇಡಿ(ಸುಧಾರಿತ ಸ್ಫೋಟಕ ಸಾಮಗ್ರಿ)ಸ್ಫೋಟಗೊಳಿಸಿದ್ದು, ದಾಳಿಯಲ್ಲಿ 6 ಗಡಿ ಭದ್ರತಾ ಪಡೆಗಳ (ಬಿಎಸ್ಎಫ್) ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ನಕ್ಸಲರು ಸ್ಫೋಟಕ ವಸ್ತು ಅಥವಾ ಐಇಡಿಯಿಂದ ಸ್ಫೋಟಗೊಳಿಸಿರಬಹುದು. ಘಟನೆಯಲ್ಲಿ 6 ಯೋಧರು ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲಾ ಮೀಸಲು ಭದ್ರತಾ ಪಡೆಯ ಒಬ್ಬ, ಬಿಎಸ್‌ಎಫ್‌ನ 414ನೇ ಬೆಟಾಲಿಯನ್‌ಗೆ ಸೇರಿದ ನಾಲ್ವರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸ್ಥಳದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ಮುಂದುವರೆದಿವೆ.
