ಚಿಕ್ಕಮಗಳೂರು :
ನಟ ಸುದೀಪ್ ಮೇಲಿನ ಕೇಸ್ ಹಿಂಪಡೆಯುವಂತೆ ನವೀನ್ ಎಂಬಾತ ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಸುದೀಪ್ ವಿರುದ್ಧ ಬಾಡಿಗೆ ಹಣ ನೀಡದ ಕುರಿತು ಈ ಹಿಂದೆ ದೀಪಕ್ ಮಯೂರ್ ಕೇಸ್ ದಾಖಲು ಮಾಡಿದ್ದರಿಂದ ದೀಪಕ್ ಮಯೂರ ಪಟೇಲ್ ಗೆ ನವೀನ್ ಧಮ್ಕಿ ಹಾಕಿದ್ದಾರೆ. ಅಂದಹಾಗೆ ನವೀನ್ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ದೀಪಕ್ ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದು ಕಿಚ್ಚ ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ ಬಾಡಿಗೆ ಹಣವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಹಿನ್ನೆಲೆಯಲ್ಲಿ ಕೇಸ್ ವಾಪಸ್ ಪಡೆಯುವಂತೆ ನವೀನ್ ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ್ದಾರೆ.
ಇದೀಗ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ದೂರು ದಾಖಲಾಗಿದ್ದು, ನಿನ್ನೆ ನವೀನ್ ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ