ಚಿಕ್ಕಮಗಳೂರು:
ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದು. ಜಿಲ್ಲೆಯ ಎನ್ಆರ್ ಪುರ ತಾಲೂಕಿನ ನೇತ್ಕಲ್ ಪ್ಲಾಂಟೇಷನ್ಗೆ ಬೆಂಕಿ ಬಿದ್ದು ಭಾರೀ ಪ್ರಮಾಣದಲ್ಲಿ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಇನ್ನು ಬೆಂಕಿ ನಂದಿಸಲು ಮುಂದಾಗಿದ್ದ ಅರಣ್ಯ ಸಿಬ್ಬಂದಿ ಮುಂದೆಯೇ ದಿಢೀರ್ ಬೈಕಿಗೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಅದೃಷ್ಟದಿಂದ ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಮಂಜಯ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ.
ನಿನ್ನೆಯೇ ನೇತ್ಕಲ್ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಇಂದು ಕೂಡ ಕಾಡ್ಗಿಚ್ಚು ಮುಂದುವರೆದಿದ್ದು, ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿದೆಯೇ ಇಲ್ಲವೇ ಯಾರಾದರೂ ಕಿಡಿಗೇಡಿಗಳು ಹಚ್ಚಿದರೋ ಇನ್ನು ತಿಳಿದು ಬಂದಿಲ್ಲ.
ಇನ್ನುಈ ಬೆಂಕಿಯಿಂದ ಸುಮಾರು ನಾಲ್ಕು ಎಕರೆಗೂ ಹೆಚ್ಚು ಭಾಗ ಅರಣ್ಯ ಸಂಪತ್ತು ನಾಶವಾಗಿದೆ. ಅಲ್ಲದೇ ಕಾಡಿನ ಸಾಕಷ್ಟು ಗಿಡಮರಗಳು ಭಸ್ಮವಾಗಿವೆ. ಜತೆಗೆ ಸಾಕಷ್ಟು ಔಷಧಿ ಗಿಡಗಳು ಮತ್ತು ಲಕ್ಷಾಂತರ ಮೌಲ್ಯದ ಮರಗಳು ಸುಟ್ಟು ಹೋಗಿವೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.