ಇನ್ನೂ ಕಾರ್ಯಾರಂಭ ಮಾಡದ ನಗರಸಭೆಯ ಆಡಳಿತ

ಚಳ್ಳಕೆರೆ:

ನಗರಸಭೆಯ ಚುನಾವಣೆ ಮುಗಿದು ಈಗಾಗಲೇ ಸುಮಾರು ಎರಡು ತಿಂಗಳು ಕಳೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲ ಮುಂದುವರೆದಿದ್ದು, ಇನ್ನೂ ನಗರಸಭೆಯ ಸದಸ್ಯರಿಗೆ ಅಧಿಕೃತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ.

ಈಗಾಗಲೇ ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೂ, ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೂ ಮೀಸಲಾಗಿದ್ದು, ಈ ಬಗ್ಗೆ ಈಗಾಗಲೇ ರಾಜ್ಯ ಹೈಕೋರ್ಟ್ ಸ್ವಷ್ಟ ನಿರ್ದೇಶನ ನೀಡಿದ್ದು, ಜಿಲ್ಲಾಧಿಕಾರಿಗಳ ಸೂಚನೆಗಾಗಿ ಕಾಯಲಾಗುತ್ತಿದೆ. ಈ ಮುಂದೆ ಕೆಲವರು ಮತ್ತೊಮ್ಮೆ ಮೀಸಲಾತಿ ಕುರಿತು ಸ್ವಷ್ಟೀಕರಣ ಬಯಸಿ ಪುನಃ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯಬೇಕಿದೆ.

ಕಳೆದ ಎರಡು ತಿಂಗಳಿನಿಂದ ಸರ್ಕಾರಿ, ಖಾಸಗಿ, ಸಹಕಾರ ಹಾಗೂ ವಿವಿಧ ಜಾತಿ ಸಮುದಾಯದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಎಲ್ಲರೂ ನೂತನ ನಗರಸಭೆಯ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿದ್ಧಾರೆ. ನಗರಸಭೆಯ ನೂತನ ಸದಸ್ಯರಿಗೆ ಈಗ ಕೇವಲ ಸನ್ಮಾನ, ಸಮಾರಂಭಗಳಲ್ಲಿ ಮಾತ್ರ ಭಾಗವಹಿಸುವುದಾಗಿದೆ. ಜನತೆಯ ಸಮಸ್ಯೆಯನ್ನು ನಿವಾರಿಸಲು ನಗರಸಭೆಯ ಆಡಳಿತವೇ ಇನ್ನೂ ಸಹ ಅಸ್ಥಿತ್ವಕ್ಕೆ ಬಂದಿಲ್ಲ.

ಪ್ರಸ್ತುತ ನಗರಸಭಾ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಸಭೆಯ ಎಲ್ಲಾ ಸಮಸ್ಯೆಗಳಿಗೂ ಪ್ರಸ್ತುತ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಪೌರಾಯುಕ್ತರು ಮಾಹಿತಿ ಮತ್ತು ವರದಿ ಆಧಾರದ ಮೇಲೆ ಕೆಲವೊಂದು ಸೂಚನೆಗಳು ಮಾತ್ರ ನೀಡಲು ಸಾಧ್ಯವಾಗಿದೆ.

ಪ್ರಸ್ತುತ ನಗರಸಭೆಯ ಚುನಾವಣೆಯಲ್ಲಿ ಗೆಲವು ಸಾಧಿಸಿದ ಬಹುತೇಕ ನೂತನ ಸದಸ್ಯರು ಯುವಕರಾಗಿದ್ದು, ನಗರದ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಉತ್ಸಾಹ ಹಾಗೂ ಚೈತನ್ಯವನ್ನು ಹೊಂದಿದ್ದು, ನಗರಸಭೆಯೇ ಇನ್ನೂ ಸಹ ಅಧಿಕಾರಿ ವಹಿಸಿಕೊಳ್ಳದ ಹಿನ್ನೆಲೆಯಲ್ಲಿ ಇವರೂ ಸಹ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ.

ಚಳ್ಳಕೆರೆ ನಗರದ ವಿಸ್ತರಣೆ ದೃಷ್ಠಿಯಿಂದ ನಾಲ್ಕೂ ದಿಕ್ಕುಗಳಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿದ್ದು, ನಗರದ ಸ್ವಚ್ಚತೆ ಹಾಗೂ ಮೂಲಭೂತ ಸೌರ್ಯಗಳನ್ನು ನೀಡಲು ಸರ್ಕಾರವೇ 27 ಸದಸ್ಯರ ಬದಲಾಗಿ 31 ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವನ್ನು ನಗರದ ಮತದಾರರಿಗೆ ನೀಡಿದ್ದು, ಮತದಾರರು ಸಹ ಈಗಾಗಲೇ ನಗರದ ಅಭಿವೃದ್ಧಿ ದೃಷ್ಠಿಯಿಂದ 31 ಸದಸ್ಯರನ್ನು ಆಯ್ಕೆ ಮಾಡಿದ್ಧಾರೆ.

ಕಳೆದ ಅವಧಿಗೆ ಹೋಲಿಸಿದಲ್ಲಿ ಈ ಬಾರಿ ಚಳ್ಳಕೆರೆ ನಗರದ ವಿಸ್ತೀರ್ಣ ಹಾಗೂ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರಿಗೂ ಕಾರ್ಯನಿರ್ವಹಿಸುವ ತವಕವಿದ್ದು ಇನ್ನೂ ಸಹ ಇವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ಸರ್ಕಾರ ಈ ಕೂಡಲೇ ನಗರಸಭೆಯನ್ನು ಪೂರ್ಣ ಅವಧಿ ಕಾರ್ಯನಿರ್ವಹಿಸುವಂತೆ ಅಧ್ಯಕ್ಷರ ಮೀಸಲಾತಿ ಗೊಂದಲಕ್ಕೆ ತೆರೆ ಹಾಕಿ ಎಲ್ಲಾ ಸದಸ್ಯರು ಕಾರ್ಯನಿರ್ವಹಿಸುವ ವಾತಾವರಣವನ್ನು ಉಂಟು ಮಾಡಬೇಕಿದೆ.

ಸದಸ್ಯರ ಅನಿಸಿಕೆ :- ನಾನು ಚಳ್ಳಕೆರೆ ನಗರಸಭೆಯ ಸದಸ್ಯನಾಗಿ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು, ನನ್ನ ವಾರ್ಡ್‍ನ ಹಲವಾರು ಸಮಸ್ಯೆಗಳ ನಿವಾರಣೆಗೆ ಪ್ರತಿನಿತ್ಯ ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಆದರೆ, ಆಡಳಿತಾಧಿಕಾರಿಯ ಅವಧಿ ಮುಗಿದ ನಂತರವಷ್ಟೇ ನಮಗೆ ಮುಕ್ತ ಅವಕಾಶದೊರೆಯಲಿದೆ. ಸರ್ಕಾರ ಕೂಡಲೇ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದು ಸದಸ್ಯರ ಆಡಳಿತಕ್ಕೆ ಅನುವು ಮಾಡಿಕೊಡಬೇಕಿದೆ.    ಎಂ.ಮಲ್ಲಿಕಾರ್ಜುನ ವಾರ್ಡ್ 5ರ ಸದಸ್ಯ.

ನಾನು ಎರಡನೇ ಬಾರಿಗೆ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದು, ಕಳೆದ ಬಾರಿಯೂ ಸಹ ಇದೇ ಸಮಸ್ಯೆ ಉಂಟಾಗಿತ್ತು. ಆದರೆ, ಸರ್ಕಾರ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯ ಬಗ್ಗೆ ಪ್ರಾರಂಭದ ಹಂತದಲ್ಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಅವಕಾಶ ನೀಡಿದ್ದರೆ. ಈಗಾಗಲೇ ಕಳೆz ಒಂದು ತಿಂಗಳಿನಿಂದಲೂ ಸದಸ್ಯರು ತಮ್ಮ ಸೇವೆಯನ್ನು ಮುಕ್ತವಾಗಿ ನೀಡಲು ಸಹಾಯವಾಗುತ್ತಿತ್ತು. ಅಧ್ಯಕ್ಷರ ಮೀಸಲಾತಿ ಗೊಂದಲ ಕೊನೆಗಾಣಬೇಕಿದೆ.
    ಬಿ.ಟಿ.ರಮೇಶ್‍ಗೌಡ 27ವಾರ್ಡ್ ನಗರಸಭಾ ಸದಸ್ಯ.

Recent Articles

spot_img

Related Stories

Share via
Copy link
Powered by Social Snap