ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ ಮುಂದಿನ ಸುಪ್ರೀಂ ಸಿಜೆಐ!!?

ದೆಹಲಿ :

      ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

      ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನವೆಂಬರ್​ 17ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಧಿಕಾರ ಮುಕ್ತಾಯದ ವೇಳೆ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವ ಸಂಪ್ರದಾಯ ರೂಢಿಯಲ್ಲಿದೆ. ಹೀಗಾಗಿ ಮುಂದಿನ ನ್ಯಾಯಮೂರ್ತಿಯಾಗಿ ಎರಡನೇ ಅತೀ ಹಿರಿಯ ನ್ಯಾಯಮೂರ್ತಿಗಳಾದ ಎಸ್​ಎ ಬೋಬ್ಡೆ ಅವರ ಹೆಸರನ್ನು ಪತ್ರದ ಮೂಲಕ ಗೊಗೋಯ್ ಶಿಫಾರಸು ಮಾಡಿದ್ದಾರೆ. 

      ಜಸ್ಟಿಸ್ ಗೊಗೊಯ್ ಬಳಿಕ ಹಿರಿತನದ ಆಧಾರದಲ್ಲಿ ಎರಡನೇ ಸ್ಥಾನದಲ್ಲಿರುವ ಜಸ್ಟಿಸ್ ಬೊಬ್ಡೆ, ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದು, 2021ರ ಎಪ್ರಿಲ್ 23ರಂದು ನಿವೃತ್ತಿಯಾಗಲಿದ್ದಾರೆ.

      ಇಡೀ ಭಾರತ ದೇಶವೇ ಸದ್ಯ ಅಯೋಧ್ಯೆ ಭೂವಿವಾದಿದ ಕುರಿತಂತೆ ಸುಪ್ರೀಂಕೋರ್ಟ್​ ನೀಡುವ ಐತಿಹಾಸಿಕ ತೀರ್ಪಿನ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಇದೇ ತೀರ್ಪನ್ನು ಓದಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ನಿವೃತ್ತರಾಗಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap