ಹೆಚ್ಡಿಕೆ – ಡಿಕೆಶಿ ನಿಜವಾದ ಜೋಡೆತ್ತುಗಳು!?
ಮಂಡ್ಯ:
ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ , ಹಿರಿಯ ಮುಖಂಡ ಡಿ. ಕೆ. ಶಿವಕುಮಾರ್ ಹಾಗೂ ನಾನು ನಿಜವಾದ ಜೋಡೆತ್ತುಗಳು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಟಾಂಗ್ ನೀಡಿದ್ದಾರೆ
ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಲು ಜೋಡೆತ್ತುಗಳು ಬರುವುದಾಗಿ ಹೇಳಿದ್ದಾರೆ. ಆ ಜೋಡೆತ್ತು ರೈತರ ಹೊಲ ಹೂಳಲು ಬರುತ್ತಿಲ್ಲ.ನೀವು ಬೆಳೆದ ಬೆಳೆಯನ್ನು ಅರ್ಧರಾತ್ರಿಯಲ್ಲಿ ಮೇಯ್ದು ಹೋಗಲು ಜೋಡೆತ್ತುಗಳು ಬರುತ್ತಿವೆ,ಅಂತಹ ಜೋಡೆತ್ತುಗಳು ನಿಮ್ಮಗೆ ಬೇಕೆ ಎಂದು ಪ್ರಶ್ನಿಸಿದರು.
ರೈತರ ಮುಗ್ದತೆ, ಪ್ರಾಮಾಣಿಕತೆ ಜೊತೆಗೆ ಚೆಲ್ಲಾಟವಾಡಲು ಬಂದಿಲ್ಲ, ಅವರ ಪ್ರಾಮಾಣಿಕತೆಗೆ ಗೌರವ ಕೊಡುತ್ತೇವೆ ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.
ರಾತ್ರೋ ರಾತ್ರಿ ಬೆಳೆಯನ್ನು ಮೇಯ್ದು ಹೋಗುವ ಜೋಡೆತ್ತುಗಳನ್ನು ನಂಬಬೇಡಿ ಎಂದು ಹೇಳಿದ ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್ ಹಾಗೂ ನಾನು ನಿಜವಾದ ಜೋಡೆತ್ತುಗಳು, ರಾಜ್ಯದ ಸಮಗ್ರ ಅಭಿವೃದ್ದಿಗೆ ನಾವಿದ್ದೇವೆ ಎಂದು ತಿಳಿಸಿದರು.