ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದು 59ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಸಾರ್ವಜನಿಕವಾ ಸಂಭ್ರಮಿಸುವುದು ಬೇಡ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ನಡೆದ ಕೆಲವು ದುರ್ಘಟನೆಗಳಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಆದ್ದರಿಂದ ನನ್ನ ಹುಟ್ಟಿದ ದಿನವನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಮನಸ್ಥಿತಿಯಲ್ಲಿ ನಾನಿಲ್ಲ. ಹಿತೈಷಿಗಳ ಹಾರೈಕೆಯೇ ನನಗೆ ಶ್ರೀರಕ್ಷೆ.
ನನ್ನ ಕುಟುಂಬದೊಡನೆ ಇರುತ್ತೇನೆ ಜನ್ಮದಿನದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಅಳವಡಿಸದಿರುವಂತೆ ಅವರು ಮನವಿ ಮಾಡಿದ್ದು, ‘ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ. ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಸಂದೇಶ’ ಎಂದು ಅವರು ವಿನಂತಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ