ಕಳಪೆ ಕಾಮಗಾರಿ: ಶಾಸಕನಿಂದ ಇಂಜಿನಿಯರ್ ಮೇಲೆ ಕೆಸರು ಎರಚಿ ಹಲ್ಲೆ!!!

ಸಿಂಧದುರ್ಗ :

      ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಸರ್ಕಾರಿ ಎಂಜಿನಿಯರ್ ಮೇಲೆ ಕೆಸರು ಚೆಲ್ಲಿ ಹಲ್ಲೆ ನಡೆಸಿ ವಿವಾದಕ್ಕೆ ಕಾರಣರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

      ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪುತ್ರ ನಿತೇಶ್ ರಾಣೆ ಎಂಬುವವರೇ ಎಂಜಿನಿಯರ್ ಮೇಲೆ ಕಾರ್ಯಕರ್ತರೊಂದಿಗೆ ಕೆಸರು ಸುರಿದು ಹಲ್ಲೆ ಮಾಡಿರುವ ಕಾಂಗ್ರೆಸ್ ಪಕ್ಷದ ಶಾಸಕ.

      ಕಂಕಾವಲಿ ಪ್ರಾಂತ್ಯದಲ್ಲಿ 600 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಘಟನೆ ನಡೆದಿದೆ. ಪಿಡಬ್ಲ್ಯೂ ಡಿ ಇಂಜಿನಿಯರ್‌ ಪ್ರಕಾಶ್‌ ಖಾಂಡೇಕರ್‌ ಅವರನ್ನು ಕರೆಸಿಕೊಂಡಿದ್ದ ರಾಣೆ, ಕಾಮಾಗಾರಿ ವಿಳಂಬ ಮತ್ತು ರಸ್ತೆಗಳಲ್ಲಿನ ಹೊಂಡಗಳ ಬಗ್ಗೆ ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

      ಅಸಮರ್ಪಕ ಕಾಮಗಾರಿ, ರಸ್ತೆಗಳ ಹೊಂಡಗಳ ಬಗ್ಗೆ ಪ್ರಶ್ನಿಸಿ ಬಕೆಟ್‌ ತೆಗೆದು ಕೊಂಡು ಕೆಸರು ನೀರನ್ನು ಇಂಜಿನಿಯರ್‌ ಮೈಮೇಲೆ ಸುರಿದಿದ್ದಾರೆ. ಅದೇ ಸ್ಥಿತಿಯಲ್ಲಿ ಎರಡು ಸೇತುವೆ ಮೇಲೆ ಕರೆದುಕೊಂಡು ಹೋಗಿ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಶಾಸಕರ ಬೆಂಬಲಿಗರು ಇಂಜಿನಿಯರ್‌ರನ್ನು ಸೇತುವೆಗೆ ಕಟ್ಟಿ ಹಾಕಿ ದಬ್ಬಾಳಿಕೆ ತೋರಿದ್ದಾರೆ.

Related image

       ಕೆಂಡಾಮಂಡಲರಾಗಿದ್ದ ರಾಣೆ 15 ದಿನಗಳೊಳಗೆ ಸಮಸ್ಯೆ ಬಗೆ ಹರಿಯಬೇಕು ಎಂದು ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದ್ದಾರೆ.

       ಬಿಜೆಪಿ ಶಾಸಕ ಆಕಾಶ್‌ ವಿಜಯವರ್ಗೀಯ ಸರ್ಕಾರಿ ಅಧಿಕಾರಿಗೆ ಬ್ಯಾಟ್‌ ಹಲ್ಲೆ ನಡೆಸಿದ ವಿಚಾರ ಭಾರೀ ಸದ್ದು ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರದ ಕಾಂಗ್ರೆಸ್‌ ಶಾಸಕ ಈ ರೀತಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap