106 ಮಂದಿಯನ್ನು ಬಲಿ ಪಡೆದ ಕೊರೋನಾ ವೈರಸ್!!!

ಬೀಜಿಂಗ್​ :

     ಚೀನಾ ಮೂಲಕ ವಿಶ್ವವ್ಯಾಪಿಯಾಗುತ್ತಿರುವ ಅತ್ಯಂತ ಅಪಾಯಕಾರಿ ಕೊರೋನಾ ವೈರಸ್‌ನಿಂದಾಗಿ ಚೀನಾ ಒಂದರಲ್ಲೇ ಈ ವರೆಗೆ 106 ಮಂದಿ ಸಾವನ್ನಪ್ಪಿದ್ದಾರೆ.

      ಚೀನಾದ ಆರೋಗ್ಯಾಧಿಕಾರಿಗಳು ಸೋಮವಾರ 2,744 ಪ್ರಕರಣಗಳನ್ನು ದೃಢಪಡಿಸಿದ್ದು, ಇದರಲ್ಲಿ 461 ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ ಸುಮಾರು 6,000 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ.

     ಚೀನಾದಲ್ಲಿ 2700 ಮಂದಿ ಕೊರೋನಾ ವೈರಸ್‌ನಿಂದ ಭಾದಿತರಾಗಿದ್ದಾರೆ. ಹಲವು ನಗರಗಳನ್ನು ‘ಲಾಕ್ ಡೌನ್’ ಮಾಡಲಾಗಿದ್ದು, ಯಾರೂ ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗದಂತೆ ಸರ್ಕಾರ ತಡೆ ಹೇರಿದೆ. ವೈರಸ್ ಹೆಚ್ಚು ಹರಡಿದರಲೆಂದು ಈ ಕ್ರಮ.

     ಕೊರೋನಾ ವೈರಸ್ ಭಾದಿತ ಪ್ರದೇಶ ಚೀನಾದ ಉಹಾನ್‌ನಲ್ಲಿ ಭಾರತದ ಸುಮಾರು 250 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಭಾರತಕ್ಕೆ ಮರಳಿ ಕರೆತರುವ ಬಗ್ಗೆ ಚೀನಾದ ಅಧಿಕಾರಗಳೊಂದಿಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ನಿನ್ನೆ ಮಾತುಕತೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ