ಲಾಕ್‍ಡೌನ್ : ಕೇಂದ್ರದಿಂದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್!!

ನವದೆಹಲಿ :

      ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಸಂಕಷ್ಟಕ್ಕೆ ಒಳಗಾಗಿರುವ ದೇಶದ ಜನರ ನೆರವಿಗೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

      ಮಂಗಳವಾರ ರಾತ್ರಿ 8ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಯಾವ ರೀತಿ ಇರಲಿದೆ ಎಂಬುದನ್ನು ನಾಳೆಯಿಂದ ಹಂತಹಂತವಾಗಿ ವಿತ್ತ ಸಚಿವರು ಮಾಹಿತಿ ನೀಡಲಿದ್ದಾರೆ. ದೇಶದ ಎಲ್ಲ ವರ್ಗಗಳನ್ನು ಒಳಗೊಂಡು ಈ ಪ್ಯಾಕೇಜ್ ರೂಪಿಸಲಾಗಿದೆ. ಶ್ರಮಿಕರಿಗೆ, ರೈತರಿಗೆ, ಬಡವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಹೇಳಿದರು.

      ಸಣ್ಣ ಉದ್ದಿಮೆಗಳ ನೆರವಿಗೆ, ಹಗಲಿರುಳು ದುಡಿಯುವ, ಮಧ್ಯಮ ವರ್ಗಕ್ಕೆ, ಉದ್ಯೋಗದಾತರಿಗೆ ಈ ವಿಶೇಷ ಪ್ಯಾಕೇಜ್ ರೂಪಿಸಲಾಗಿದೆ. ಶ್ರಮಿಕರು, ಬಡವರು, ರೈತರಿಗೆ ಜನ್ ಧನ್, ಮೊಬೈಲ್, ಆಧಾರ್ ಮೂಲಕ ಮಾಹಿತಿ ಒದಗಿಸಲಾಗುತ್ತದೆ. ಒಟ್ಟಾರೆ ದೇಶದ ಸಮಗ್ರ ಆರ್ಥಿಕ ಸಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

      ನಾಲ್ಕನೇ ಹಂತದ ಲಾಕ್‍ಡೌನ್ ಸಂಪೂರ್ಣ ಹೊಸದಾಗಿ ಇರಲಿದೆ, ಹೊಸ ನಿಯಮಗಳೊಂದಿಗೆ ಜಾರಿಗೆ ಬರಲಿದೆ. ಮೇ 18ರೊಳಗೆ ಈ ಮಾಹಿತಿ ಪ್ರಕಟಿಸಲಾಗುವುದು. ಕೊರೊನಾದೊಂದಿಗೆ ಬದುಕು ಸಾಗಿಸಲು ಹೊಸ ನಿಯಮಗಳೊಂದಿಗೆ ಸಜ್ಜಾಗಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಲಾಕ್‌ಡೌನ್‌ 4.0 ಸಂಪೂರ್ಣ ವಿಭಿನ್ನ..! 

     ಮಾನವ ಕುಲಕ್ಕೆ ಇದು ಕಲ್ಪನಾತೀತ ಪರಿಸ್ಥಿತಿ. ನಾನು ಈ ಹೋರಾಟದಲ್ಲಿ ನಾವು ಇನ್ನಷ್ಟು ಧೈರ್ಯದಿಂದ ಎದುರಿಸಬೇಕಾಗಿದೆ. ಭಾರತ ಆತ್ಮ ನಿರ್ಭರ ದೇಶ ಆಗಬೇಕು. ಸ್ವಾವಲಂಬಿ ಭಾರತ ಎಂಬುದನ್ನು ನಾವು ತೋರಿಸಬೇಕು.

      ವಿಶ್ವವೇ ಒಂದು ಪರಿವಾರ ಎಂದು ನಾವು ಅಂದುಕೊಂಡಿದ್ದೇವೆ. ಇದು ಭಾರತದ ಸಂಸ್ಕೃತಿ, ಸಂಸ್ಕಾರ ಸ್ವಾವಲಂಬಿಯಾಗಿದೆ. ಎಲ್ಲರಿಗೂ ಸುಖ-ಸಮೃದ್ಧಿ ಸಿಗಲಿ ಎಂದು ಆಶಿಸುವವರೇ ಭಾರತೀಯರು.

      ಗುಲಾಮಿ ಮನಸ್ಥಿತಿಯಿಂದ ಈಗ ಹೊರ ಬಂದಿದ್ದೇವೆ. ಕ್ಷಯ, ಪೊಲಿಯೋ, ಅಪೌಷ್ಟಿಕತೆ ಸಮಸ್ಯೆಗಳನ್ನು ಮೆಟ್ಟಿನಿಂತು ಭಾರತ ಯಶಸ್ವಿಯಾಗಿದೆ. ಈ ಶತಮಾನದ ಆರಂಭದಲ್ಲಿ ಇಡೀ ವಿಶ್ವಕ್ಕೆ ವೈ2ಕೆ (Year 2000) ಸಂಕಷ್ಟ ಎದುರಾದಾಗ ನಮ್ಮ ಭಾರತೀಯ ತಂತ್ರಜ್ಞರು ಇಡೀ ವಿಶ್ವಕ್ಕೆ ಪರಿಹಾರ ಕಂಡುಹಿಡಿದುಕೊಟ್ಟರು.

      ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಆರಂಭಿಸಲು ಮುಂದಾಗಿನಿಂದ ಮೋದಿ ಇದುವರೆಗೆ ನಾಲ್ಕು ಬಾರಿ ಭಾಷಣ ಮಾಡಿದ್ದರು. ಈಗ ಮತ್ತೊಮ್ಮೆ ಭಾಷಣ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap