ಕೊರೊನಾ : ಭಾರತದಲ್ಲಿ ಒಂದೇ ದಿನ 9851 ಸೋಂಕು, 273 ಸಾವು!

ನವದೆಹಲಿ :

      ದೇಶದಲ್ಲಿ ದಿನೇದಿನೆ ಕೊರೊನಾ ವೈರಸ್ ಹಾವಳಿ  ತನ್ನ ಉಗ್ರ ಸ್ವರೂಪ ಹೆಚ್ಚಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 9,851 ಸೋಂಕು ಪ್ರಕರಣಗಳು ದಾಖಲಾಗಿದ್ದು, 273 ಮಂದಿ ಸತ್ತಿದ್ದಾರೆ.

      ಈವರೆಗೂ ಒಂದು ದಿನದಲ್ಲಿ ದಾಖಲಾಗಿರುವ ಗರಿಷ್ಠ ಸೋಂಕು ಪ್ರಕರಣವಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,26,770ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೂ 1,09,462 ಮಂದಿ ಗುಣಮುಖರಾಗಿದ್ದು,  ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಶೇ.48.27ರಷ್ಟಿದೆ. 

     ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಏಳನೇ ಸ್ಥಾನಕ್ಕೇರಿದೆ. 

      ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ ಸತತ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ 9,000 ದಾಟಿದ್ದು (ಮೊನ್ನೆ 9,304) ಇದು ವಿಶ್ವದಲ್ಲೇ ಮೂರನೇ ಅಧಿಕ ಸೋಂಕು ಪ್ರಕರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link