ಸೂರತ್ :
ಕೊರೋನಾ ವೈರಸ್ ನಿಂದ ವಜ್ರದ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹಾಂಗ್ ಕಾಂಗ್ ಜೊತೆಗಿನ ರಫ್ತು ವ್ಯವಹಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೂರತ್ ವಜ್ರೋದ್ಯಮ ಸಾವಿರಾರು ಕೋಟಿ ನಷ್ಟ ಎದುರಿಸುವಂತಾಗಿದೆ.
ಸೂರತ್‌ನಿಂದ ಪಾಲಿಶ್ ಮಾಡಿದ ವಜ್ರಾಭರಣ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಹಾಂಕಾಂಗ್ ಮುಂಚೂಣಿಯಲ್ಲಿದೆ. ಪ್ರತಿವರ್ಷ ಸೂರತ್ ನಿಂದ 50,000 ಕೋಟಿ ಮೌಲ್ಯದ ವಜ್ರ ಹಾಂಕಾಂಗ್’ಗೆ ರಫ್ತಾಗುತ್ತದೆ.
ಆದರೆ ಕೊರೋನಾ ಭೀತಿ ಕಾರಣ ಹಾಂಕಾಂಗ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು, ಇನ್ನು 2 ತಿಂಗಳ ಅವಧಿಗೆ ಅಲ್ಲಿಗೆ ವಜ್ರ ರಫ್ತು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹೀಗಾದಲ್ಲಿ ಸುಮಾರು 8000 ಕೋಟಿ ರು. ವಹಿವಾಟು ನಷ್ಟವಾಗುತ್ತದೆ ಎಂದು ಸ್ಥಳೀಯ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾ ಹಾಗೂ ಹಾಂಕಾಂಗ್ ನಲ್ಲಿ ನಮ್ಮ ಅನೇಕ ಕಚೇರಿಗಳಿವೆ. ಕೊರೋನಾ ವೈರಸ್ ಹರಡುವ ಭೀತಿಯಿಂದಾಗಿ ಎಲ್ಲಾ ಕಚೇರಿಗಳೂ ಬಂದ್ ಆಗಿವೆ. ಕೆಲಸಕ್ಕೆ ಬರಲು ಸಿಬ್ಬಂದಿಗಳು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ನಷ್ಟ ಉಂಟಾಗಿದೆ ಎಂದು ವಜ್ರದ ವ್ಯಾಪಾರಿ ಕೀರ್ತಿ ಶಾ ಎಂಬುವವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ