ದೇಶದಲ್ಲಿ 43 ಲಕ್ಷದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ!!

ನವದೆಹಲಿ:

     ದೇಶದಲ್ಲಿ ಕೋವಿಡ್ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 90 ಸಾವಿರ ಸಮೀಪ ಹೊಸ ಪ್ರಕರಣಗಳು ಪತ್ತೆಯಾಗಿವೆ.

      ಆ ಮೂಲಕ ಒಟ್ಟಾರೆ ಸೊಂಕಿತರ ಸಂಖ್ಯೆ 43 ಲಕ್ಷದ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

     ಕಳೆದ ಒಂದೇ ದಿನ 89,706 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಆ ಮೂಲಕ ಸೊಂಕಿತರ ಒಟ್ಟು ಪ್ರಮಾಣ 43,70,128ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ ಸುಮಾರು 1,115 ಜನರು ಸೋಂಕಿನ ಕಾರಣದಿಂದ ಪ್ರಾಣತ್ಯೆಜಿಸಿದ್ದಾರೆ. ಆ ಮೂಲಕ ಒಟ್ಟು ಮೃತರ ಪ್ರಮಾಣ 73,890ಕ್ಕೆ ಜಿಗಿದಿದೆ. ಸುಮಾರು 33 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ 77.32% ರಷ್ಟಿದೆ.

    ಭಾರತ ಇದೀಗ ಅತೀ ಹೆಚ್ಚು ಕೋವಿಡ್ ವೈರಾಣು ತಗುಲಿರುವ ದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ ಮುಂದುವರೆದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap