ದೇಶದಲ್ಲಿ ಶೇ.52% ಕೊರೋನಾ ಸೋಂಕಿತರು ಗುಣಮುಖ!!

ನವದೆಹಲಿ: 

     ದೇಶದಲ್ಲಿ ಪ್ರತಿ ನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಈ ನಡುವೆ ಸಮಾಧಾನಕರ ಸಂಗತಿಯೊಂದನ್ನು ಕೇಂದ್ರ ಆರೋಗ್ಯ ಇಲಾಖೆ ಹೊರ ಹಾಕಿದೆ.

      ಹೌದು…ಭಾರತದಲ್ಲಿ 3,32,424 ಮಂದಿಯಲ್ಲಿ ಈವರೆಗೂ ಸೋಂಕು ಕಂಡು ಬಂದಿದೆ. ಈ ಪೈಕಿ 1,69,797 ಮಂದಿ ಚೇತರಿಸಿಕೊಂಡು ಗುಣಮುಖವಾಗಿದ್ದಾರೆ. ಸದ್ಯ 1,53,106 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಭಾರತದಲ್ಲಿರುವ ಒಟ್ಟಾರೆ ಸೋಂಕಿತರ ಪೈಕಿ ಶೇ.52.47ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ. 

      ಚೇತರಿಕೆ ಪ್ರಕರಣ ಸಕ್ರಿಯ ಪ್ರಮಾಣಕ್ಕಿಂತ ನಿರಂತರ ಏಳು ದಿನಗಳಿಂದ ಹೆಚ್ಚಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಏಳು ದಿನಗಳ ಹಿಂದೆ ಸಕ್ರಿಯ ಮತ್ತುಚೇತರಿಕೆ ಪ್ರಮಾಣ ಸರಿಸಮನವಾಗಿತ್ತು. ಅಕ್ಟಿವ್ ಕೇಸ್‍ಗಳಿಗಿಂತ ರಿಕವರಿ ರೇಟ್‍ನಲ್ಲಿ ವೃದ್ದಿ ಕಂಡುಬಂದುಅದುಒಂದು ವಾರದಿಂದ ಮುಂದುವರಿದಿರುವುದು ಜನರಲ್ಲಿ ನಿರಾಳತೆಯ ಭಾವ ಮೂಡಿಸಿದೆ.

     ಈ ಬೆಳವಣಿಗೆಯು ಸಾಂಕ್ರಾಮಿಕ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. ಕೊರೊನಾ ಸೋಂಕು ತಗುಲಿದರೆ ಸಾವು ಖಚಿತ ಎಂಬ ಭ್ರಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿಇದುಒಂದು ಪರಿಣಾಮಕಾರಿ ವಿದ್ಯಮಾನವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ