ನವದೆಹಲಿ :
ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆ ಕೋವಿಶೀಲ್ಡ್‌ನ 1.5 ಲಕ್ಷ ಡೋಸೇಜ್ ಲಸಿಕೆಯನ್ನು ಭಾರತವು ನೆರೆರಾಷ್ಟ್ರ ಭೂತಾನ್‌ಗೆ ಉಡುಗೊರೆಯಾಗಿ ನೀಡಿದೆ.
ಈಗಾಗಲೇ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋವಿಡ್ ‘ಕೊವಿಶೀಲ್ಡ್ ‘ ಲಸಿಕೆಯನ್ನು ಭೂತಾನ್‌ನ ಟಿಂಫುಗೆ ಇಂದು(ಬುಧವಾರ) ಬೆಳಗ್ಗೆ ರವಾನಿಸಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ, 1,50,000 ಡೋಸ್‌ಗಳನ್ನು ಭೂತಾನ್ ರಾಜಧಾನಿ ಥಿಂಪುವಿಗೆ ನೇರವಾಗಿ ತಲುಪಿಸಲಾಗುವುದು. ಲಸಿಕೆ ಇಂದು ಮಧ್ಯಾಹ್ನದ ಹೊತ್ತಿಗೆ ಭೂತಾನ್‌ನ ರಾಜಧಾನಿ ಟಿಂಫುಗೆ ತಲುಪಬಹುದು ಎಂದು ಹೇಳಲಾಗಿದೆ.
ಈ ಮೂಲಕ ಭೂತಾನ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲಾದ ಕೊವಿಶೀಲ್ಡ್ ಲಸಿಕೆಯನ್ನು ಭಾರತದಿಂದ ಕೊಡುಗೆಯಾಗಿ ಪಡೆದುಕೊಳ್ಳುತ್ತಿರುವ ದೇಶವಾಗಿದೆ.
ಭೂತಾನ್ ಜೊತೆಗೆ ಅನ್ಯೋನ್ಯ ಬಾಂಧವ್ಯ ಕಾಪಾಡಿರುವ ಭಾರತ, ಕೋವಿಡ್-19 ಕಠಿಣ ಕಾಲಘಟ್ಟದಲ್ಲೂ ಭೂತಾನ್‌ಗೆ ಇಲ್ಲಿಯವರೆಗೆ ಅಗತ್ಯ ಔಷಧಿಗಳನ್ನು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದೆ. ಇದರಲ್ಲಿ ಪ್ಯಾರಾಸಿಟಮಾಲ್, ಹೈಡ್ರಾಕ್ಸಿಕ್ಲೋರೋಕ್ವಿನ್, ಪಿಪಿಇ ಕಿಟ್‌ಗಳು, ಎನ್ 95 ಮಾಸ್ಕ್‌ಗಳು, ಎಕ್ಸರೆ ಯಂತ್ರಗಳು ಮತ್ತು 2.8 ಕೋರ್‌ಗಿಂತ ಹೆಚ್ಚಿನ ಮೌಲ್ಯದ ಪರೀಕ್ಷಾ ಕಿಟ್‌ಗಳನ್ನು ಭೂತಾನ್‌ಗೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ