ನವದೆಹಲಿ :

ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಡಿಸಿಜಿಐ ಅನುಮತಿ ನೀಡಿದ್ದು, ಜನವರಿ 13 ರಿಂದಲೇ ಲಸಿಕೆ ವಿತರಣೆ ಮಾಡುವ ಸಾಧ್ಯತೆಯಿದೆ.
ಕೊರೊನಾ ರೂಪಾಂತರಿ ಸೊಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿರುವ ಬೆನ್ನಲ್ಲೆಯೇ ಸರ್ಕಾರ ಈ ಪ್ರಕಟಣೆ ಹೊರಡಿಸಿದ್ದು, ಇನ್ನು 10 ದಿನಗಳೊಳಗೆ ಲಸಿಕೆ ವಿತರಣೆ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು, ಸಂಕ್ರಾಂತಿ ಹಬ್ಬಕ್ಕಿಂತ ಮೊದಲು ಅಂದರೆ ಜನವರಿ 13ರಿಂದಲೇ ಲಸಿಕೆ ವಿತರಣೆ ಮಾಡುವ ಸಾಧ್ಯತೆಯಿದೆ.
ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ಆಸ್ಟ್ರಾಜೆನೆಕಾ ಹಾಗೂ ಆಕ್ಸ್ಫರ್ಡ್ನಿಂದ ಪರವಾನಗಿ ಪಡೆದು ಲಸಿಕೆ ಅಭಿವೃದ್ಧಿಪಡಿಸಿ ತಯಾರಿಸಿದೆ.
ಜ.3 ರ ಭಾನುವಾರ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸೀರಂನ ಆಕ್ಸ್ ಫರ್ಡ್ ಕೋವಿಡ್-19 ಲಸಿಕೆ ‘ಕೋವಿಶೀಲ್ಡ್’ ಮತ್ತು ದೇಶದಲ್ಲಿ ತುರ್ತು ಬಳಕೆಗೆ ನಿರ್ಬಂಧಿತ ತುರ್ತು ಬಳಕೆಗೆ ಭಾರತ್ ಬಯೋಟೆಕ್ ನ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಅನ್ನು ಅನುಮೋದಿಸಿತು. ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಗಳಿಗೆ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದೆ.
ಕೇಂದ್ರ ಔಷಧಗಳ ಪ್ರಮಾಣ ನಿಯಂತ್ರಣ ಸಂಸ್ಥೆಯ (ಸಿಡಿಎಸ್ ಸಿಒ) ಕೋವಿಡ್-19 ವಿಷಯ ತಜ್ಞರ ಸಮಿತಿ (ಎಸ್ ಇಸಿ) ಶಿಫಾರಸುಗಳ ಆಧಾರದ ಮೇಲೆ ಡಿಸಿಜಿಐ ಈ ಅನುಮೋದನೆಯನ್ನು ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








