ಪ್ಯಾರಾಮಿಲಿಟರಿಯಲ್ಲಿ ಸೇವೆ : ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಧೋನಿ ಅಲಭ್ಯ!!

ರಾಂಚಿ: 

     ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. 

      ಹೌದು, ಧೋನಿ ಟೆರಿಟೋರಿಯಲ್ ಆರ್ಮಿಯ ಪ್ಯಾರಾಶೂಟ್ ರೆಜಿಮೆಂಟ್ ನ ಕರ್ನಲ್ ಆಗಿದ್ದಾರೆ. ಧೋನಿ ಅವರೇ ಸ್ವಇಚ್ಛೆಯಿಂದ ವೆಸ್ಟ್ ಇಂಡೀಸ್ ಜೊತೆಗಿನ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ಹಾಗೂ ತಮ್ಮ ಎರಡು ತಿಂಗಳ ರಜಾವಧಿಯನ್ನು ಪ್ಯಾರಾಮಿಲಿಟ್ರಿ ರೆಜಿಮೆಂಟ್ ಜೊತೆ ಕಳೆಯಲಿದ್ದಾರೆ.

     38 ವರ್ಷದ ಧೋನಿ ಕ್ರಿಕೆಟ್​ ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವಿಶ್ವಕಪ್​ ಮುಗಿಯುತ್ತಿದ್ದಂತೆ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಅವರು ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಸದಸ್ಯರು ಸಭೆ ಸೇರುವ ಕೆಲವೇ ದಿನಗಳು ಬಾಕಿಯಿರುವಂತೆ ತಾವು ಪ್ರವಾಸಕ್ಕೆ ಲಭ್ಯರಿಲ್ಲ ಎಂದು ನಾಯಕ ವಿರಾಟ್​ ಕೊಹ್ಲಿ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ಗೆ ಮಾಹಿತಿ ನೀಡಿದ್ದೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link