ಪುಲ್ವಾಮಾ ಮಾದರಿಯಲ್ಲಿ ಸಿಆರ್ಪಿಎಫ್ ವಾಹನಕ್ಕೆ ಕಾರು ಬಂದು ಡಿಕ್ಕಿ ಹೊಡೆದಿರುವ ದಾಳಿ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ನಲ್ಲಿ ನಡೆದಿದೆ.
ಸಿಆರ್ಪಿಎಫ್ ವಾಹನ ಬಳಿ ಕಾರಿನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಕಾರು ಛಿದ್ರ ಛಿದ್ರವಾಗಿದೆ. ಕಾರು ಡಿಕ್ಕಿ ಹೊಡೆದ ಬಳಿಕ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೇಲ್ನೋಟಕ್ಕೆ ಇದು ಭಯತ್ಪೋದಾನಾ ದಾಳಿಯ ರೀತಿಯಲ್ಲಿ ಕಾಣಿಸುತ್ತಿಲ್ಲ. ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಈ ಅವಘಡ ಸಂಭವಿಸಿದೆ. ಸ್ಫೋಟದ ಸ್ಥಳದಿಂದ ಸಿಆರ್ ಪಿಎಫ್ ವಾಹನ ತುಂಬಾ ದೂರದಲ್ಲಿ ನಿಂತಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನು ಸಿಆರ್ಪಿಎಫ್ ವಾಹನದಲ್ಲಿ ನಮ್ಮ ಸೈನಿಕರು ಇದ್ರಾ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿಗೆ ಸಂಚು ನಡೆದಿತ್ತೇ ಎನ್ನುವ ಅನುಮಾನ ಮೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/CRPF.gif)