ಮುಂಬೈ:
ಗೂಗಲ್ ಪೇ ಮೂಲಕ ವಿದ್ಯುತ್ ಬಿಲ್ ಕಟ್ಟಲು ಹೋಗಿ ವ್ಯಕ್ತಿಯೊಬ್ಬ 96 ಸಾವಿರ ರೂ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಮೂಲದ 31 ವರ್ಷದ ವ್ಯಕ್ತಿಯೊಬ್ಬರಿಗೆ ವಂಚಕನೊಬ್ಬ ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಪೋಸ್ ನೀಡಿ 96 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರು ಆ ವ್ಯಕ್ತಿ ಗೂಗಲ್ ಪೇ ಮೂಲಕ ಕರೆಂಟ್ ಬಿಲ್ ಪಾವತಿಸಲು ಹೊರಟಿದ್ದರು. ಹಣ ವರ್ಗಾವಣೆ ಸಂದರ್ಭದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ವರ್ಗಾವಣೆಯಾಗಿಲ್ಲ. ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿದ್ದಾರೆ. ಈ ವೇಳೆ ಒಂದು ನಂಬರ್ ಕಾಣಿಸಿದೆ. ಆ ನಂಬರಿಗೆ ಕರೆ ಮಾಡಿದಾಗ, ಆ ವ್ಯಕ್ತಿ “ನಾನು ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ” ಹಣ ಪಾವತಿ ಮಾಡುವಾಗ ಸಾಮಾನ್ಯವಾಗಿ ಸಮಸ್ಯೆ ಎದುರಾಗುತ್ತದೆ ಹಾಗಾಗಿ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನೊಂದು ಲಿಂಕ್ ಕಳುಹಿಸುತ್ತೇನೆ. ಆ ಲಿಂಕ್ ಕ್ಲಿಕ್ ಮಾಡಿ ಎಂದು ಸೂಚಿಸಿದ್ದಾನೆ.
ಈತನ ಮಾತಿನ ಮೇಲೆ ನಂಬಿಕೆ ಇಟ್ಟು ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ 96 ಸಾವಿರ ರೂ. ಹಣ ವಂಚಕನ ಖಾತೆಗೆ ಹೋಗಿದೆ. ಹಣ ವರ್ಗಾವಣೆಯದ ನಂತರ ತಾನು ವಂಚನೆ ಒಳಗಾದ ವಿಚಾರ ವ್ಯಕ್ತಿಗೆ ಗೊತ್ತಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ಗೂಗಲ್ ಪೇಯಂತಹ ಆನ್ಲೈನ್ ಹಣ ವರ್ಗಾವಣೆ ಮಾಡುವ ಆಪ್ ಗಳನ್ನು ದಾಳವಾಗಿ ಬಳಸಿಕೊಂಡು ಹಣ ಕದಿಯಲು ಆರಂಭಿಸಿದ್ದಾರೆ. ಇದರಿಂದ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರು ಎಚ್ಚೆತ್ತುಕೊಳ್ಳಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ