ಅಂಫಾನ್ ಚಂಡಮಾರುತದ ಅಬ್ಬರಕ್ಕೆ 12 ಬಲಿ!!!

ನವದೆಹಲಿ:

Members of National Disaster Response Force (NDRF) remove a branch of an uprooted tree after Cyclone Amphan made its landfall, in West Bengal’s Digha, on Wednesday.

      ಬಂಗಾಳ ಕೊಲ್ಲಿಯಲ್ಲಿ ರೌದ್ರಾವಾತಾರ ತಾಳಿರುವ ವರ್ಷದ ಅತ್ಯಂತ ಕೆಟ್ಟ ಚಂಡಮಾರುತ ಅಂಫಾನ್​​ಗೆ ಈಗಾಗಲೇ ಪಶ್ಚಿಮ ಬಂಗಾಳದ 12 ಮಂದಿ ಬಲಿಯಾಗಿದ್ದಾರೆಂ

      ಕೊರೊನಾ ಕಾಟದ ನಡುವೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅಬ್ಬರಿಸುತ್ತಿದ್ದು, ಗಂಟೆಗೆ ಸುಮಾರು 185 ಕಿ.ಮೀ ವೇಗದಲ್ಲಿ ಪ್ರಬಲವಾದ ಬಿರುಗಾಳಿ ಬೀಸುತ್ತಿದೆ. ಪರಿಣಾಮ ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು, ಕಟ್ಟಡಗಳು ನೆಲಕಚ್ಚಿವೆ. ಪಶ್ಚಿಮ ಬಂಗಾಳದಲ್ಲಿ 10ರಿಂದ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

      ಅಂಫಾನ್ ಅಟ್ಟಹಾಸಕ್ಕೆ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿದ್ದು, ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿದ್ದು, ಭಾರಿ ಹಾನಿಯುಂಟಾಗಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

      ಚಂಡಮಾರುತದ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಕಾರುಗಳು ತರಗೆಲೆಗಳಂತೆ ಉರುಳಿ ಬೀಳುತ್ತಿವೆ. ವಿದ್ಯುತ್​ ಕಂಬಗಳು ಧರೆಗುರುಳುತ್ತಿವೆ. ಅನೇಕ ಏರಿಯಾಗಳಲ್ಲಿ ವಿದ್ಯುತ್​ ಇಲ್ಲದೇ ಕತ್ತಲೆ ಕವಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಬೇರು ಸಮೇತ ಧರೆಗೆ ಉರುಳುತ್ತಿವೆ. ನಿನ್ನೆ ರಾತ್ರಿ ಕೊಲ್ಕತಾ ಸೇರಿದಂತೆ ಅನೇಕ ಜಿಲ್ಲೆಗಳು ವಿದ್ಯುತ್​ ಸಮಸ್ಯೆಯನ್ನು ಎದುರಿಸಿದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap