ಲಕ್ನೋ :
ಮದುವೆ ಸಮಾರಂಭವೊಂದರಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಚಿತ್ರಕೂಟ್‌ನಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವತಿ ವೇದಿಕೆಯಲ್ಲಿ ಕುಣಿಯುತ್ತಿದ್ದಾಗ ಕುಡುಕನೊಬ್ಬ ಗೋಲಿ ಚಲ್ ಜಾಯೇಗಿ (ಗುಂಡು ಹಾರಿಸುವೆ ) ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಈ ಸಂದರ್ಭದಲ್ಲಿ ಆರೋಪಿ ಜೊತೆ ಮತ್ತೊಬ್ಬ ವ್ಯಕ್ತಿ, ಅಣ್ಣ ನೀನು ಈಗ ಗುಂಡು ಹಾರಿಸಲೇ ಬೇಕು ಎಂದು ಹೇಳಿದ್ದಾನೆ. ಈ ವೇಳೆ ಗುಂಡು ಹಾರಿ ಮಹಿಳೆಯ ಮುಖಕ್ಕೆ ತಾಗಿದೆ. ತಕ್ಷಣ ಎಲ್ಲರೂ ಆಘಾತಕ್ಕೆ ಒಳಗಾದರು. ಮಹಿಳೆಯ ಮುಖಕ್ಕೆ ಗುಂಡು ಬಿದ್ದಿದೆ.
UP woman shot in the face because she ‘stopped dancing’ at wedding in UP’s Chitrakoot. You can hear men in the video saying ‘Goli chal jayegi’ and then ‘goli chala hi do’. She’s critical. pic.twitter.com/cIUzgFxqlo
— Shiv Aroor (@ShivAroor) December 6, 2019
ಈ ವೇಳೆ ವರನ ಸೋದರ ಮಾವಂದಿರಾದ ಮಿತಿಲೇಶ್ ಮತ್ತು ಅಖಿಲೇಶ್ ಕೂಡಾ ಈ ಘಟನೆಯಲ್ಲಿ ಗಾಯೊಂಡಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಪೊಲೀಸರು ಹೇಳಿದ್ದಾರೆ.
ಗುಂಡು ತಾಗಿ ಗಾಯಗೊಂಡಿರುವ ಮಹಿಳೆ ಕಾನ್ಪುರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿದುಬಂದಿದೆ.
ಸುಧೀರ್ ಸಿಂಗ್ ಪಟೇಲ್ ಅವರ ಮಗಳ ಮದುವೆ ಡಿಸೆಂಬರ್ 1ರಂದು ನಡೆದಿದ್ದು, ಈ ವೇಳೆ ಈ ಘಟನೆ ನಡೆದಿದೆ. ಒಂದು ನಿಮಿಷದ ವಿಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ