ಭಿವಂಡಿ (ಮಹಾರಾಷ್ಟ್ರ) :
ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು.
ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಕಟ್ಟಡದ ಭಗ್ನಾವಶೇಷ ಗಳಿಂದ ಇನ್ನೂ ಎಂಟು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 37ಕ್ಕೇರಿವೆ.
ಮೂರು ಹಸುಳೆಗಳೂ ಸೇರಿದಂತೆ 2 ರಿಂದ 14ರ ವಯೋಮಾನದ 15 ಮಕ್ಕಳೂ ಸಹ ಈ ದುರಂತದಲ್ಲಿ ಅಸು ನೀಗಿದ್ಧಾರೆ. ಈವರೆಗೆ 25 ಜನರನ್ನು ಆವಶೇಷಗಳಿಂದ ಜೀವಂತವಾಗಿ ಹೊರಗೆ ತಂದು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಾಯಾಳುಗಳಿಗೆ ಭೀವಂಡಿ ಮತ್ತು ಥಾಣೆ ಜಿಲ್ಲೆಗಳ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
1984ರಲ್ಲಿ ನಿರ್ಮಾಣವಾಗಿದ್ದ 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ದುರ್ಬಲವಾಗಿತ್ತು ಎಂದು ಹೇಳಲಾಗಿದೆ.
ಪ್ರಕರಣದ ತನಿಖೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಈ ಘಟನೆ ಸಂಬಂಧ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.’
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
