ಬೆಂಗಳೂರು :
2021ರ ಏರೋ ಇಂಡಿಯಾ ಪ್ರದರ್ಶನವಕ್ಕೆ ದಿನಾಂಕ ನಿಗದಿಯಾಗಿದೆ. ಈ ಬಾರಿ 2021ರ ಏರೋ ಇಂಡಿಯ ಪ್ರದರ್ಶನ ಬೆಂಗಳೂರಿನಲ್ಲಿಯೇ ನಡೆಯಲಿದ್ದು, ದಿನಾಂಕ ಕೂಡ ಪ್ರಕಟವಾಗಿದೆ.
ಈ ಕುರಿತಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಮಾಹಿತಿ ಲಭ್ಯವಾಗಿದ್ದು, 2021ರ ಏರೋ ಇಂಡಿಯಾ ಪ್ರದರ್ಶನವನ್ನು ಫೆಬ್ರವರಿ 3ರಿಂದ 5ರ ನಡುವೆ ಬೆಂಗಳೂರಿನಲ್ಲಿ ನಡೆಯಲು ನಿರ್ಧರಿಸಲಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮಗಳೊಂದಿಗೆ ಬೆಂಗಳೂರಿನಲ್ಲಿಯೇ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ನಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ.
ಈಗಾಗಲೇ ಏರೋ ಇಂಡಿಯಾ ಪ್ರದರ್ಶನ ಆಯೋಜನೆಯ ಬಗ್ಗೆ ಹಲವಾರು ಆಂತರಿಕ ಸಭೆಗಳನ್ನು ನಡೆಸಲಾಗಿದೆ. ಹಲವಾರು ದೇಶಗಳ ಅಧಿಕೃತ ನಿಯೋಗಗಳಲ್ಲದೇ ಜಾಗತಿಕ ರಕ್ಷಣಾ ಉತ್ಪಾದಕ ಸಂಸ್ಥೆಗಳು ಕೂಡ ಏರೋ ಇಂಡಿಯಾದಲ್ಲಿ ಭಾಗವಹಿಸುವುದಾಗಿ ತಿಳಿದು ಬಂದಿದೆ.
