ನವದೆಹಲಿ:
ಏರ್ ಇಂಡಿಯಾ ಪೈಲಟ್‌ಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಮಾಸ್ಕೋಗೆ ಹೋಗುತ್ತಿದ್ದ ವಿಮಾನ ದೆಹಲಿಗೆ ವಾಪಸ್ ಆಗಿದೆ.
ಮಾಸ್ಕೋದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಹೋಗುತ್ತಿದ್ದ ಈ ವಿಮಾನ ಟೇಕಾಫ್ ಆಗುವ ಮುನ್ನ ಸಿಬ್ಬಂದಿಗಳ ಪೂರ್ವ-ಹಾರಾಟದ ಪರೀಕ್ಷಾ ವರದಿಗಳನ್ನು ಪರಿಶೀಲಿಸುವಾಗ ಈ ಪೈಲಟ್ ಪಾಸಿಟಿವ್ ವರದಿಯನ್ನು ನೆಗಟಿವ್ ಎಂದು ತಪ್ಪಾಗಿ ಓದಿಕೊಳ್ಳಲಾಗಿದೆ. ನಂತರ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿದ್ದು, ವಿಮಾನವನ್ನು ಉಜ್ಬೇಕಿಸ್ತಾನ್ ವಾಯು ನೆಲೆಯಲ್ಲಿ ವಿಮಾನವನ್ನು ಇಳಿಸಲಾಗಿದೆ. ಬಳಿಕ ವಾಪಸ್ ಬರುವಂತೆ ಸೂಚಿಸಲಾಗಿತ್ತು. ಇಂದು ಮಧ್ಯಾಹ್ನ 12.30ರ ಸುಮಾರಿಗೆ ವಿಮಾನ ದೆಹಲಿಗೆ ವಾಪಸ್ ಆಗಿದೆ.
ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ, ಅದು ಖಾಲಿ ವಿಮಾನವಾಗಿತ್ತು. ಎಂದು ಏರ್ ಇಂಡಿಯಾದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
