ನವದೆಹಲಿ:
ಭಾರತದಲ್ಲಿ ಉಗ್ರ ದಾಳಿ ನಡೆಸುವುದಕ್ಕಾಗಿ ಜೈಷ್ ಎ ಮೊಹಮದ್ ಮುಖ್ಯಸ್ಥ ಹಾಗೂ ಅಂತರರಾಷ್ಟ್ರೀಯ ಉಗ್ರ ಮಸೂದ್ ಅಜರ್ ನನ್ನು ಪಾಕಿಸ್ತಾನ ಸರ್ಕಾರ ರಹಸ್ಯವಾಗಿ ಬಿಡುಗಡೆ ಮಾಡಿದ್ದು ಗಡಿ ನಿಯಂತ್ರಣ ರೇಖೆಗಳಲ್ಲಿ ಕಟ್ಟೆಚ್ಚರ ವಹಿಸುವುವಂತೆ ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ.ಫೆ.14 ರಂದು ಜಮ್ಮುವಿನ ಪುಲ್ವಾಮಾದಲ್ಲಿ ಬಾಂಬ್ ದಾಳಿಯಾಗಿ 40 ಅರೆಸೇನಾ ಪಡೆಯ ಯೋಧರು ಹತರಾದ ನಂತರ ಮಸೂದ್ ಅಜರ್ ನನ್ನು ಇಸ್ಲಮಾಬಾದಿನಲ್ಲಿ ಬಂಧಿಸಲಾಗಿತ್ತು.
ಮೂಲಗಳ ಪ್ರಕಾರ’ ಕಣಿವೆ ರಾಜ್ಯದಲ್ಲಿ 370 ವಿಧಿಯನ್ನು ಹಿಂತೆಗೆದುಕೊಂಡಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಸಾಯಿಲ್ ಕೋಟ್, ಜಮ್ಮು ಹಾಗೂ ರಾಜಸ್ಥಾನ ಗಡಿ ಪ್ರದೇಶದ ಪ್ರಮುಖ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮಸೂದ್ ಅಜರ್ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ.
ಪಾಕ್ ಸರ್ಕಾರ ಇತ್ತೀಚಿಗಷ್ಟೆ ಕಾಶ್ಮೀರ ಹಾಗೂ ರಾಜಸ್ಥಾನ ಗಡಿಗಳಲ್ಲಿ ಹೆಚ್ಚುವರಿ ಸೇನೆ ಜಮಾವಣೆ ಮಾಡಿತ್ತು. ಎರಡು ದಿನಗಳ ಹಿಂದಷ್ಟೆ ಅಲ್ಲಿನ ಪ್ರಧಾನಿ, ಸೇನಾ ಮುಖ್ಯಸ್ಥರು ಎಲ್ ಒಸಿಗೆ ಭೇಟಿ ನೀಡಿದ್ದರು. ಭಾರತೀಯ ಸೇನೆಗೆ ಯಾವುದೇ ರೀತಿಯ ಪ್ರತಿರೋಧವನ್ನು ಎದುರಿಸಲು ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
