ಬಿಬಿಎಂಪಿ ಮೇಯರ್ ಚುನಾವಣೆ : ‘ದೋಸ್ತಿ’ಗಳೇ ಮೇಯರ್-ಉಪಮೇಯರ್…!?

ಬೆಂಗಳೂರು: 

      ಇಲ್ಲಿನ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಪ್ರಕ್ರಿಯೆಯು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರ ನೇತೃತ್ವದಲ್ಲಿ ನಡೆದಿದ್ದು, ಅಧಿಕಾರದ ಚುಕ್ಕಾಣಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್‌ ದೋಸ್ತಿ ಸರ್ಕಾರದ ಪಾಲಾಗಿದೆ.

 ಮೇಯರ್‌ ಆಗಿ ಕಾಂಗ್ರೆಸ್‌ನ ಗಂಗಾಬಿಕಾ ಹಾಗೂ ಜೆಡಿಎಸ್‌ನ ರಮೀಳಾ ಉಮಾಶಂಕರ್ ಅವರು ಆಯ್ಕೆಯಾಗಿದ್ದಾರೆ.

   

 

 

ಒಟ್ಟು 259 ಸದಸ್ಯರ ಪೈಕಿ 253 ಮಂದಿ ಸದಸ್ಯರು ಹಾಜರಾಗಿದ್ದು, ಇದರಲ್ಲಿ ಕಾಂಗ್ರೆಸ್‍ನಿಂದ ಮೂವರು, ಬಿಜೆಪಿಯಿಂದ ಇಬ್ಬರು ಮತ್ತು ಜೆಡಿಎಸ್‍ನಿಂದ ಒಬ್ಬರು ಕಾಂಗ್ರೆಸ್‍ನ ಶಾಸಕ ರೋಷನ್‍ಬೇಗ್, ಆಶಾಸುರೇಶ್ ಮತ್ತು ಲಲಿತಾ ತಿಮ್ಮನಂಜಯ್ಯ, ಬಿಜೆಪಿಯ ಸಚಿವ ಅನಂತ್‍ಕುಮಾರ್, ನಿರ್ಮಲಾ ಸೀತಾರಾಮ್, ಜೆಡಿಎಸ್‍ನ ನಾಜಿಂಖಾನ್ ಅವರು ಸಭೆಗೆ ಗೈರು ಹಾಜರಾಗಿದ್ದಾರೆ.

     ಈಗಾಗಲೇ ಮೂವರು ಜೆಡಿಎಸ್​ ಸದಸ್ಯರು ಪಕ್ಷ ನಿಷ್ಠೆ ಬದಲಿಸಿದ್ದರು. ಇಬ್ಬರು ಪಕ್ಷೇತರರು ಬಿಜೆಪಿ ಸೇರಿದ್ದರು. ಹೀಗಾಗಿ ಈ ಬಾರಿಯ ಅಧಿಕಾರ ಯಾರಿಗೆ ಎಂಬುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

      ಜೆಡಿಎಸ್​ ವಿರುದ್ಧ ತಿರುಗಿ ಬಿದ್ದ 3 ಸದಸ್ಯರ ಪೈಕಿ ಮಂಜುಳಾ ನಾರಾಯಣ ಸ್ವಾಮಿ ಮತ್ತು ದೇವದಾಸ್​ ಅವರು ಬಿಜೆಪಿ ಮಾಜಿ ಡಿಸಿಎಂ ಆರ್​.ಆಶೋಕ್​ ಅವರೊಂದಿಗೇ ಬಿಬಿಎಂಪಿ ಕಚೇರಿಗೆ ಆಗಮಿಸಿ, ಕಾಂಗ್ರೆಸ್​-ಜೆಡಿಎಸ್​ಗೆ ದಿಗ್ಭ್ರಮೆ ಮೂಡಿಸಿದ್ದರು. ಮತ್ತೊಬ್ಬ ಸದಸ್ಯ ಇಮ್ರಾನ್​ ಪಾಷಾ ಜೆಡಿಎಸ್​ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದ್ದರು. ಇನ್ನು ಪಕ್ಷೇತರ ಸದಸ್ಯರಾದ ರಮೇಶ್​ ಮತ್ತು ಆನಂದ್​ ಕೂಡ ಬಿಜೆಪಿ ಸದಸ್ಯರ ಜತೆಗೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್​ಗೆ ಆತಂಕ ಉಂಟು ಮಾಡಿತ್ತು

ಮೇಯರ್‍ ಗಿರಿಗಾಗಿ ಕೈ-ಕೈ ಮಿಲಾಯಿಸಿದ ಬಿಜೆಪಿ-ಕಾಂಗ್ರೆಸ್:

      ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗಿರಿಗಾಗಿ ಕಾಂಗ್ರೆಸ್,ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕೈ-ಕೈ ಮಿಲಾಯಿಸಿದ ಪ್ರಸಂಗ ಪಾಲಿಕೆಯಲ್ಲಿ ನಡೆಯಿತು.

      ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್ ಅವರು ಬಿಜೆಪಿ ನಾಯಕರೊಂದಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಈ ಮೂರು ಪಕ್ಷಗಳ ನಾಯಕರೂ ಕೂಡಾ ಸಿಟ್ಟಿಗೆದ್ದ ಸದರಿ ಪಕ್ಷಗಳ ನಾಯಕರು ಗಲಾಟೆ ಮಾಡುವ ಮೂಲಕ ಕಾರ್ಪೋರೇಟರ್ಸ್ ಕಿತ್ತಾಡಿಕೊಂಡು ಬೃಹತ್ ನಾಯಕರು ತಮ್ಮ ಸಣ್ಣತನವನ್ನು ಬಯಲು ಮಾಡಿಕೊಂಡರು.

ಬಿಜೆಪಿ ಸದಸ್ಯರಿಂದ ಸಭಾತ್ಯಾಗ:

      ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣಾ ಪ್ರಕ್ರಿಯೆಯಲ್ಲಿ ಹೈಡ್ರಾಮಾ ನಡೆದ ಬಳಿಕ ಬಿಜೆಪಿಯ ಎಲ್ಲಾ ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ಸೋಲನ್ನ ಒಪ್ಪಿಕೊಂಡಿದ್ದಾರೆ.

      ಮತದಾನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಸಭಾತ್ಯಾಗ ಮಾಡಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ ದೋಸ್ತಿಗೆ ಮತ್ತೆ  ಜಯ ಸಿಕ್ಕಿದೆ.

ಚುನಾವಣೆ ಬಹಿಷ್ಕಾರ

       ಒಂದು ಮತದಿಂದ ನಾವು ಗೆಲ್ಲಬೇಕಾಗಿತ್ತು, ಆದರೆ, ಕಾಂಗ್ರೆಸ್‍ನ ಗೂಂಡಾಗಿರಿಯ ಕಾನೂನುಬಾಹಿರ ಚುನಾವಣೆಯಿಂದಾಗಿ ನಾವು ಚುನಾವಣೆಯನ್ನು ಬಹಿಷ್ಕರಿಸಿರುವುದಾಗಿ ಬಿಜೆಪಿ ಶಾಸಕ ಆರ್.ಅಶೋಕ್ ಅವರು ಬಿಬಿಎಂಪಿ ಕಚೇರಿಯಲ್ಲಿ ತಿಳಿಸಿದರು.

ಕೊನೆಗೂ ದೋಸ್ತಿ ಪಕ್ಷಗಳಿಗೊಲಿದ ಮೇಯರ್-ಉಪಮೇಯರ್ ಪಟ್ಟ

      ಹೈಡ್ರಾಮದ ಬಳಿಕ ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ದೋಸ್ತಿ ಪಕ್ಷಗಳಿಗೆ ಒಲಿದಿದೆ. ಮೇಯರಾಗಿ ವಾರ್ಡ್ ಸಂಖ್ಯೆ 153ರ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಪರವಾಗಿ 130 ಮತಗಳನ್ನು ಪಡೆದಿದ್ದಾರೆ.

      ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಶೋಭಾ ಆಂಜನಪ್ಪ ಅವರು ಸ್ಪರ್ಧಿಸಿದ್ದು, ಅವರ ಪರವಾಗಿ ಯಾರೂ ಕೂಡಾ ಬೆಂಬಲಿಸದೇ ಇರುವುದರಿಂದ ಅವರು ಸೋಲನ್ನನುಭವಿಸಿದ್ದಾರೆ. ಉಪಮೇಯರಾಗಿ ಕಾವೇರಿಪುರದ ವಾರ್ಡ್ ಸಂಖ್ಯೆ 103ರ ಜೆಡಿಎಸ್ ಸದಸ್ಯೆ ರಮೀಳಾ ಉಮಾಶಂಕರ್ ಅವರ ಪರವಾಗಿ 129 ಮತ ಪಡೆದು ಆಯ್ಕೆಗೊಂಡಿದ್ದಾರೆ. ಇನ್ನೂ ಉಪಮೇಯರ್ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಪ್ರತಿಭಾ ಧನರಾಜ್ ಕಣದಲ್ಲಿದ್ದು. ಅವರ ಪರವಾಗಿ ಯಾವುದೇ ಮತ ಬೀಳದೇ ಇರುವುದರಿಂದ ಅವರು ಪರಾಜಿತಗೊಂಡಿದ್ದಾರೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap