ಬೆಂಗಳೂರು:
ಏರ್ ಇಂಡಿಯಾ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ರದ್ದು ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಮತ್ತೆ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಸಮನ್ಸ್ ಜಾರಿಗೊಳಿಸಿದ್ದರು.
ನಿನ್ನೆ ಇಡಿ ಅಧಿಕಾರಿಗಳು ಡಿಕೆಶಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಇಂದು ದೆಹಲಿಗೆ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲು ತೆರಳಿದ್ದಾರೆ.
ತಮ್ಮ ಮನೆಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಡಿಕೆಶಿ, ತಮ್ಮ ಪತ್ನಿ, ತಾಯಿ ಹಾಗೂ ಮಕ್ಕಳಿಗೆ ಧೈರ್ಯ ಹೇಳಿ ಹೊರಟಿದ್ದಾರೆ. ‘ತಾವು ದೆಹಲಿಯಿಂದ ವಾಪಾಸ್ ಬರುವುದು ಒಂದು ದಿನ, ಎರಡು ದಿನ ಅಥವಾ ಒಂದು ವಾರ ಆಗಬಹುದು, ವಿಚಾರಣೆ ವೇಳೆ ತಮ್ಮನ್ನು ಅಧಿಕಾರಿಗಳು ಬಂಧಿಸಲೂಬಹುದು,ನನ್ನ ಜೊತೆ ಒಂದು ತಂಡವೇ ಇದೆ. ಭಯಪಡಬೇಡಿ. ಈ ಬಾರಿ ಗೌರಿ-ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸುವುದು ಕಷ್ಟ. ಧೈರ್ಯವಾಗಿರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂದು ಹೇಳಿ ಮನೆಯಿಂದ ಏರ್ ಪೋರ್ಟ್ ಗೆ ಪ್ರಯಾಣ ಬೆಳೆಸಿದರು.
ಇಂದು ಸಂಜೆ ಸಂಜೆ 4.30ರ ವೇಳೆಗೆ ತಲುಪಲಿದ್ದು, 5 ಗಂಟೆ ಸುಮಾರಿಗೆ ದೆಹಲಿಯ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ