ನಾಯಿಗಳ ಪಾಲಾದ ಕೊರೊನಾ ಸೋಂಕಿತನ ಶವ!

ಹೈದರಾಬಾದ್ :

      ನಿರಾಶ್ರಿತರ ಕೇಂದ್ರದಲ್ಲಿ ವ್ಯಕ್ತಿಯೊಬ್ಬನ ಮೃತದೇಹವನ್ನು ನಾಯಿಗಳು ಕಚ್ಚಿ ತಿಂದಿರುವ ಆಘಾತಕಾರಿ ಘಟನೆ ನಡೆದಿದೆ.

      ಇಲ್ಲಿಯ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ಬಳಿ ಇರುವ ನಿರಾಶ್ರಿತರ ಕೇಂದ್ರದಲ್ಲಿ ಇಂತಹ ಆಘಾತಕಾರಿ ಘಟನೆ ನಡೆದಿದ್ದು, ಮೃತನನ್ನು ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಬಿಟ್ರಗುಂಟ ಗ್ರಾಮದ ನಿವಾಸಿ ಕಾಂತ ರಾವ್ ಎಂದು ಗುರುತಿಸಲಾಗಿದೆ.

     ಮೃತ ವ್ಯಕ್ತಿಯ ಮುಖಕ್ಕೆ ನಾಯಿ ಕಚ್ಚಿ ಗಾಯ ಮಾಡಿದೆ ಹಾಗೂ ಶವದ ಕಿವಿ ಭಾಗ ಕಾಣೆಯಾಗಿದೆ.

     ಈತ ಕರೊನಾ ಸೋಂಕಿತನಾಗಿರುವ ಶಂಕೆಯನ್ನು ಅಲ್ಲಿಯ ಜನರು ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಹಾಗೂ ಬಡವರಿಗಾಗಿ ಇಲ್ಲಿ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ವ್ಯಕ್ತಿ ವಾಸವಾಗಿದ್ದ. ಕರೊನಾ ಸೋಂಕಿನಿಂದ ಈತ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.  ಆದರೆ ಆತ ಕೊರೊನಾ ಸೋಂಕಿತನಾ ಅಥವಾ ಅಲ್ವಾ ಎಂಬುದು ಸ್ಪಷ್ಟವಾಗಿಲ್ಲ. 

      ಈ ಘಟನೆಗೆ ರಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾಂತ ರಾವ್ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು. ಘಟನೆಯ ಬಗ್ಗೆ ತನಿಖೆ ನಡೆಸಿದ ನಂತರ ಮೃತ ವ್ಯಕ್ತಿಯು ಇದಕ್ಕೂ ಮುಂಚೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂಬ ಸಂಗತಿ ಹೊರ ಬಿದ್ದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link