ವಾಷಿಂಗ್ಟನ್ :
ಬೆಳಕಿನ ಹಬ್ಬ ದೀಪಾವಳಿಯನ್ನು ಅಮೆರಿಕಾದಲ್ಲಿ ಆಚರಿಸುವ ಮೂಲಕ ದೇಶದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವ ಸಾರುತ್ತದೆ ಎಂದಿದ್ದಾರೆ.
ನಿನ್ನೆ ಒವಲ್ ಕಚೇರಿಯಲ್ಲಿ ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿ ಆಚರಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಚರಣೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಅಮೆರಿಕದಾದ್ಯಂತ ದೀಪಾವಳಿಯ ಆಚರಣೆಯು ನಮ್ಮ ರಾಷ್ಟ್ರದ ಒಂದು ಪ್ರಮುಖ ಸಿದ್ಧಾಂತವಾದ ಧಾರ್ಮಿಕ ಸ್ವಾತಂತ್ರ್ಯದ ಮಹತ್ವದ ಸಂಕೇತ ಸಾರುತ್ತದೆ ಎಂದು ಹೇಳಿ, ವಿಶ್ವದಲ್ಲಿರುವ ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ಧರ್ಮೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ಆತ್ಮಸಾಕ್ಷಿಗೆ ತಕ್ಕಂತೆ ಹಬ್ಬಗಳನ್ನು ಆಚರಿಸಿ ಸಂಭ್ರಮಿಸಲು ನನ್ನ ಸಹಮತವಿದೆ. ದೀಪಾವಳಿ ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟತನದ ವಿರುದ್ಧ ಒಳ್ಳೆತನದ ಜಯ ಹಾಗೂ ಅಜ್ಞಾನದ ಮೇಲಿನ ಜ್ಞಾನವನ್ನು ಸ್ಮರಿಸುವ ಒಂದು ಅವಕಾಶ ಎಂದು ಟ್ರಂಪ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ