‘ಪುಲ್ವಾಮ ದಾಳಿಗೆ ನಾವು ಹೊಣೆಯಲ್ಲ’ : ಪಾಕ್

ಇಸ್ಲಾಮಾಬಾದ್​: 

      ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.

     ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರು.

      ‘ಯಾವುದೇ ತನಿಖೆ ನಡೆಸದೆ ಭಾರತದ ಮಾಧ್ಯಮಗಳು ಈ ದಾಳಿಗೆ ಪಾಕ್ ಹೆಸರನ್ನು ಜೋಡಿಸುತ್ತಿರುವುದನ್ನು ನಾವು ಬಲವಾಗಿ ತಿರಿಸ್ಕರಿಸುತ್ತೇವೆ. ಭಾರತ ಸರಕಾರ ತನಿಖೆ ನಡೆಸದೆ ಈ ದಾಳಿಗೆ ಪಾಕ್‌ ಬೆಂಬಲವಿದೆ ಎಂದು ಹೇಳಬಾರದು. ‘ಇದೊಂದು ಅತ್ಯಂತ ಹೇಯಕೃತ್ಯ ಮತ್ತು ಗಂಭೀರವಾಗಿ ಚಿಂತಿಸಬೇಕಾದ ವಿಷಯ’ ಎಂದಿರುವ ಪಾಕಿಸ್ತಾನ, ಈ ಘಟನೆಗೂ ನನಗೂ ನಂಟು ಕಲ್ಪಿಸಬೇಡಿ ಎಂದಿದೆ.

      ಈ ಕುರಿತು ಅಧಿಕೃತವಾಗಿ ಟ್ವೀಟ್​ ಮಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಡಾ. ಮೊಹಮದ್​ ಫೈಸಲ್​, ” ಭಾರತ ಆಕ್ರಮಿತ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿಯ ಬಗ್ಗೆ ಪಾಕಿಸ್ತಾನ ಬೇಸರ ಹೊಂದಿದೆ. ಕಣಿವೆ ರಾಜ್ಯದಲ್ಲಿ ನಡೆಯುವ ಉಗ್ರ ಕೃತ್ಯಗಳನ್ನು ಪಾಕಿಸ್ತಾನ ಸದಾ ಖಂಡಿಸುತ್ತದೆ. ಆದರೆ, ಘಟನೆಯ ತನಿಖೆಯೇ ಆಗದೆ ಪಾಕಿಸ್ತಾನವನ್ನು ಹೊಣೆಯಾಗಿಸುವ ಭಾರತ ಸರ್ಕಾರ ಮತ್ತು ಭಾರತೀಯ ಮಾಧ್ಯಮಗಳ ನಡೆ ಸರಿಯಲ್ಲ,” ಎಂದು ಅವರು ಟ್ವೀಟ್​ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap