ಏಪ್ರಿಲ್ 20 ರ ನಂತರ ಆನ್​ಲೈನ್ ನಲ್ಲಿ ಎಲ್ಲಾ ವಸ್ತುಗಳು ಲಭ್ಯ!!!

ನವದೆಹಲಿ: 

      ಲಾಕ್ಡೌನ್ ಎರಡನೇ ಅವಧಿ ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದ್ದರೂ ಸಹಾ ಏಪ್ರಿಲ್​ 20ರ ಬಳಿಕ ಅತ್ಯಾವಶ್ಯವಲ್ಲದ ವಸ್ತುಗಳನ್ನು ಕೂಡ ಆನ್​ಲೈನ್​ ಮೂಲಕ ಆರ್ಡರ್​ ಮಾಡಬಹುದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. 

      ಮೊದಲ ಹಂತದ ಲಾಕ್​ಡೌನ್​ ಸಂದರ್ಭದಲ್ಲಿ ಆನ್​ಲೈನ್​ ಇ- ವಾಣಿಜ್ಯ ಸಂಸ್ಥೆಗಳಿಗೆ ಜೀವನಾವಶ್ಯಕ ವಸ್ತುಗಳನ್ನಷ್ಟೇ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ, ಏಪ್ರಿಲ್​ 20ರ ನಂತರ ಎಲ್ಲ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದೆ. ಈವರೆಗೆ ಅಗತ್ಯ ವಸ್ತುಗಳೆಂದು ವರ್ಗೀಕರಣ ಮಾಡಲಾಗದ ವಸ್ತುಗಳೆಲ್ಲವೂ ಈ ವಿಭಾಗದಲ್ಲಿ ಬರುತ್ತವೆ ಎಂದು ಸ್ಪಷ್ಟನೆ ನೀಡಲಾಗಿದೆ. ಆದ್ದರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಸೇವಾ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.

Online Shopping System, Globally, Rs 15000 /year, Telcom Cafe | ID ...

      ಈ ಸಂಸ್ಥೆಗಳ ಉದ್ಯೋಗಿಗಳು ತಮ್ಮ ವಾಹನ ಹಾಗೂ ತಮಗೆ ಪಾಸ್ ಗಳನ್ನು ಪಡೆಯುವುದು ಅಗತ್ಯವಾಗಿದೆ. ಎಂಟು ಡಿಸಿಪಿಗಳಿಂದ ಈ ಪಾಸ್ ಪಡೆಯಬಹುದಾಗಿದೆ. ಆದೇಶದಲ್ಲಿ ಸೂಚಿಸಿದಂತೆ, ದಿನಸಿ, ಡೆಲವರಿ ಬಾಯ್ಸ್, ಟೆಲಿಕಾಂ, ವೈದ್ಯಕೀಯ, ಡೇಟಾ ಸೆಂಟರ್, ಬ್ಯಾಂಕ್, ವಿಮೆ, ಕೆಲವು ಸೆಕ್ಯುರಿಟಿ ಏಜೆನ್ಸಿ ಕಾರ್ಯ ನಿರ್ವಹಿಸಲು ಅನುಮತಿ ಇದ್ದು ,ಎಲ್ಲರಿಗೂ ಪಾಸ್ ಅಗತ್ಯವಿದೆ.

      ಲಾಕ್​ಡೌನ್​ ಸಮಯದಲ್ಲಿ ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದವು. ಆದರೆ, ಫೋನ್​, ಲ್ಯಾಪ್​ಟಾಪ್​ಗಳ ಹಾಗೂ ಇವುಗಳ ಬಿಡಿಭಾಗಗಳ ತೀವ್ರ ಕೊರತೆ ಉಂಟಾಗಿತ್ತು. ಈ ಎಲ್ಲ ವಸ್ತುಗಳನ್ನು ಅತ್ಯಾವಶ್ಯವಲ್ಲದ ವಸ್ತುಗಳೆಂದು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೂ ಇವನ್ನು ಪಡೆಯುವುದು ಸಾಧ್ಯವಾಗಿರಲಿಲ್ಲ.  ಇದೀಗ ಏ.20 ರ ನಂತರ ಇಂತಹ ತೊಂದರೆಗಳು ಕಡಿಮೆಯಾಗಬಹುದು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap