ದೇಶದ ಬೆಳವಣಿಗೆ ದರ ಕುಂಠಿತ!!?

 ದೆಹಲಿ :

      ಭಾರತೀಯ ಆರ್ಥಿಕ ಚಟುವಟಿಕೆಗಳು ಬೆಳವಣಿಗೆಯ ರಭಸವನ್ನು ಕಳೆದುಕೊಂಡಿದ್ದು, ವೃದ್ದಿ ದರ ನಿಧಾನಗೊಂಡಿರುವುದನ್ನು ಉತ್ತೇಜಿಸಲು ನಿರ್ಣಾಯಕ ವಿತ್ತೀಯ ನೀತಿಯ ಅಗತ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

Related image

      ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಗುರುವಾರ ಬಹಿರಂಗಪಡಿಸಲಾಗಿದ್ದು, ಅದರಲ್ಲಿ ಈ ವಿವರಗಳಿವೆ. ದೇಶಿ ಆರ್ಥಿಕ ವೃದ್ಧಿ ದರವು ಕುಂಠಿತಗೊಂಡಿರುವುದನ್ನು ದಾಸ್‌ ಅವರು ಒಪ್ಪಿಕೊಂಡಿರುವುದು ಸಭೆಯ ಕಲಾಪದಲ್ಲಿ ದಾಖಲಾಗಿದೆ. 

     2012-2017ರ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಶೇ. 5ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ ಎಂದು ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಹೇಳಿದ್ದರು. ಕೇಂದ್ರ ಸರ್ಕಾರ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಬೆನ್ನಲ್ಲೇ ಶಕ್ತಿಕಾಂತ್ ದಾಸ್ ಅವರು ಈ ವಿಷಯ ಬಹಿರಂಗಗೊಳಿಸಿದ್ದಾರೆ. 

      2018–19ರ ಹಣಕಾಸು ವರ್ಷದ 4ನೆ ತ್ರೈಮಾಸಿಕದ ವೃದ್ಧಿ ದರವು ಶೇ 5.8ಕ್ಕೆ ಇಳಿದಿದೆ. ಬೆಳವಣಿಗೆಯ ವೇಗವು ನಿಧಾನಗೊಂಡಿದೆ. ಅದರಲ್ಲೂ ವಿಶೇಷವಾಗಿ ಬಂಡವಾಳ ಹೂಡಿಕೆ ಚಟುವಟಿಕೆಗಳು ತೀವ್ರ ಕುಸಿತ ಕಂಡಿವೆ’ ಎಂದು ದಾಸ್‌ ಅವರು ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap