ಶ್ರೀನಗರ:
ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
#UPDATE: The firing has now stopped. A search operation is underway. More details awaited. https://t.co/bV6Rg3jzj3
— ANI (@ANI) March 1, 2019
ಭಯೋತ್ಪಾದಕರು ಉಗ್ರಗಾಮಿಗಳು ಅಡಗಿಕೊಂಡಿರುವ ಮಾಹಿತಿ ತಿಳಿದ ಭಾರತೀಯ ಸೇನೆ ಅವರನ್ನು ಸುತ್ತುವರಿದು ದಾಳಿ ಮಾಡಿದ್ದು, ಭದ್ರತಾಪಡೆ ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದೆ. ಈ ಚಕಮಕಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕುಪ್ವಾರದಲ್ಲೂ ಉಗ್ರರ ಉಪಟಳ ಮುಂದುವರಿದಿದ್ದು, ಮೂವರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಸುತ್ತುವರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
