ಬಾಗಲಕೋಟೆ :
ಕುಮಾರಸ್ವಾಮಿ ಮತ್ತು ಡಿಕೆಶಿ ಇಬ್ಬರೂ ಗೂಳಿಗಳು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ದೋಸ್ತಿ ನಾಯಕರ ವಿರುದ್ಧ ತೀವ್ರ ವ್ಯಂಗ್ಯವಾಗಿ ಮಾತನಾಡಿದ್ದರೆ.

ಈ ಗೂಳಿಗಳು ಏನು ಮಾಡುತ್ತವೆ ಅಂತ ಅವುಗಳಿಗೆ ಗೊತ್ತಿರಲ್ಲ. ಎರಡೂ ಗುಳಿಗಳೂ ಶಕ್ತಿಶಾಲಿಯಾಗಿರುತ್ತವೆ. ಕೊಬ್ಬಿದ ಗೂಳಿ ಇನ್ನೊಂದು ಗೂಳಿಯನ್ನು ಸಾಯಿಸೇ ಬಿಡುತ್ತದೆ ಎಂದು ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಗೂಳಿಗಳಿಗೆ ಹೋಲಿಸಿ ವ್ಯಂಗ್ಯ ಮಾಡಿದರು.
ಈ ಎರಡು ಗೂಳಿಗಳು ಒಂದಾಗಿದ್ದು ಯಾವಾಗ ಅಂತ ರಾಜ್ಯದ ಜನ ಗಮನಿಸುತ್ತಿದ್ದಾರೆ. ಚುನಾವಣೆ ಮುಗಿಯುತ್ತಲೇ ಮೈತ್ರಿ ಸಕಾ೯ರ ಬೀಳುತ್ತೇ ಅನ್ನೋ ಭಯದಿಂದ ಗೂಳಿಗಳು ಒಂದಾಗಿದ್ದಾವೆ. ಒಂದಾಗದಿದ್ದರೆ ಒಬ್ಬರಿಗೆ ಸಿಎಂ ಸ್ಥಾನ, ಮತ್ತೊಬ್ಬರಿಗೆ ಮಂತ್ರಿ ಸ್ಥಾನ ಹೋಗುತ್ತೆ ಎನ್ನುವ ಭಯ.
ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪರಸ್ಪರ ಗೆಲುವಿಗೆ ಶ್ರಮಿಸುವುದಿಲ್ಲ. ಈಗ ಹೇಗೇಗೂ ಚುನಾವಣೆ ಎದುರಿಸುತ್ತಾರೆ. ಬಳಿಕ ಬಹಿರಂಗವಾಗಿಯೇ ಬಡಿದಾಡುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಸಕಾ೯ರ ಬಿದ್ದು ಹೋಗುತ್ತದೆ. ದೇವೇಗೌಡ ಮತ್ತು ಸಿದ್ದರಾಮಯ್ಯ ಇಬ್ಬರು ಧೃತರಾಷ್ಟ್ರರು. ಮೇಲ್ನೋಟಕ್ಕೆ ಸ್ನೇಹತ್ವ ತೋರಿಸುತ್ತಿದ್ದಾರೆ. ಇಬ್ಬರೂ ಧೃತರಾಷ್ಟ್ರರು ಅವರಿಬ್ಬರು ಆಲಿಂಗನ ಮಾಡಿಕೊಳ್ಳುತ್ತಾರೆ. ಹೀಗಾಗಿ ಎರಡು ಪಕ್ಷಗಳು ನಿರ್ನಾಮ ಆಗುತ್ತವೆ ಎಂದು ಭವಿಷ್ಯ ನುಡಿದರು.
ನೈತಿಕತೆಯಿಂದಲೇ ಪ್ರಧಾನಿ ಮೋದಿ ಪ್ರಶ್ನಿಸ್ತೀನಿ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯಗೆ ನೈತಿಕತೆ ಇದ್ದಿದ್ದರೆ ಚಾಮುಂಡೇಶ್ವರಿಯಲ್ಲಿ ಜನ ಗೆಲ್ಲಿಸುತ್ತಿದ್ದರು. ಜನ ನನ್ನನ್ನು ಸೋಲಿಸಿದ್ರು ಎಂದು ಜನರ ತೀರ್ಮಾನಕ್ಕೆ ಬದ್ಧ ಎಂದಿದ್ದರೆ ನೈತಿಕತೆ ಎಂದು ಹೇಳಬಹುದಿತ್ತು. ಸೋತ ಮೇಲೂ ನನ್ನನ್ನು ಜನ ಹೊಟ್ಟೆ ಕಿಚ್ಚಿನಿಂದ ಸೋಲಿಸಿದ್ರು ಎಂದು ಹೇಳ್ತಾರೆ. ಇದು ಜನಕ್ಕೆ ಮಾಡಿರುವ ಅಪಮಾನ. ಯಾವ ನೈತಿಕತೆಯೂ ಸಿದ್ದರಾಮಯ್ಯಗೆ ಇಲ್ಲವೆಂದು ಈಶ್ವರಪ್ಪ ಟಾಂಗ್ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








