ಭುವನೇಶ್ವರ:
ವಿಷಾನಿಲ ಸೋರಿಕೆಯಾಗಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಒಡಿಶಾದ ರೂರ್ಕೆಲಾ ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ನಡೆದಿದೆ.
ಗಣೇಶಚಂದ್ರ ಪೈಲಾ (55), ರವೀಂದ್ರ ಸಾಹು (59), ಅಭಿಮನ್ಯು ಶಾ (33) ಹಾಗೂ ಬ್ರಹ್ಮಾನಂದ ಪಾಂಡಾ (51) ಮೃತ ಕಾರ್ಮಿಕರು.
ಘಟನೆ ನಡೆದಾಗ ಕಾರ್ಮಿಕರು ಕಲ್ಲಿದ್ದಲು ರಾಸಾಯನಿಕ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಸೇಲ್) ಒಡೆತನದ ಕಾರ್ಖಾನೆ ಇದಾಗಿದೆ. ಕಾರ್ಖಾನೆಯ ಕಲ್ಲಿದ್ದಲು ವಿಭಾಗದಲ್ಲಿ ಬೆಳಗಿನ ಪಾಳಿಯಲ್ಲಿ 10 ಜನ ಕಾರ್ಮಿಕರು ಕರ್ತವ್ಯದಲ್ಲಿದ್ದರು. ಈ ಪೈಕಿ ಹೊರಗುತ್ತಿಗೆ ಆಧಾರದ ನಾಲ್ವರು ಕಾರ್ಮಿಕರು 9 ಗಂಟೆ ವೇಳೆ ಅಸ್ವಸ್ಥರಾದರು. ಕೂಡಲೇ ಅವರನ್ನು ಕಾರ್ಖಾನೆಗೆ ಹೊಂದಿಕೊಂಡಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇಸ್ಪಾಟ್ ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು’ ಎಂದು ಕಾರ್ಖಾನೆ ಅಧಿಕಾರಿಗಳು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
