ಭುವನೇಶ್ವರ್(ಒಡಿಶಾ):
ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನ ವಿಫಲವಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ.
ಚಂದ್ರಯಾನ-2 ಆರ್ಬಿಟ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿನ 8 ವಸ್ತುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ವಿಕ್ರಂ ಲ್ಯಾಂಡರ್ ಸಂಪರ್ಕ ಮರು ಸ್ಥಾಪಿಸಲು ಪ್ರಯತ್ನ ನಡೆಸಲಾಯಿತಾದರೂ ಸಾಧ್ಯವಾಗಲಿಲ್ಲ. ಇನ್ನು, ನಮ್ಮ ಮುಂದಿನ ಆದ್ಯತೆ ಏನಿದ್ರೂ ಗಗನಯಾನ ಮಿಷನ್ ಎಂದಿದ್ದಾರೆ.
ಜುಲೈ 22ರ ಮಧ್ಯಾಹ್ನ ಆಂಧ್ರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್ 2ರಂದು ಚಂದ್ರನ ಕಕ್ಷೆ ಸೇರಿತ್ತು. ಯೋಜನೆಯಂತೆ ಸೆಪ್ಟೆಂಬರ್ 7ರ ನಸುಕಿನ ಜಾವ ರೋವರ್ ಒಳಗೊಂಡ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಬೇಕಿತ್ತು. ಆದರೆ, ಲ್ಯಾಂಡಿಂಗ್ಗೂ ಕೆಲ ಕ್ಷಣಗಳ ಮುನ್ನ ಲ್ಯಾಂಡರ್ ಸಂಪರ್ಕ ಕಡಿತವಾಗಿತ್ತು.

ಈ ಲ್ಯಾಂಡರ್ ಮತ್ತು ರೋವರ್ ಜೀವಿತಾವಧಿ 14 ದಿನಗಳು. ಇಂದು ವಿಕ್ರಮ್‍ನನ್ನು ಪತ್ತೆ ಮಾಡಲು ಸತತ 14 ದಿನಗಳಿಂದ ಹಗಲು-ರಾತ್ರಿ ಶ್ರಮಿಸಿದ ಇಸ್ರೋದ ಗಡುವು ಇಂದು ಮುಕ್ತಾಯಗೊಳ್ಳಲಿದೆ.
ಈ ಗಡುವು ಮುಗಿಯಲು ಇನ್ನು ಕೆಲವು ಗಂಟೆಗಳು ಮಾತ್ರ ಬಾಕಿಯಿದ್ದು, ಲ್ಯಾಂಡರ್ ಜೊತೆ ಮರು ಸಂಪರ್ಕ ಸಾಧಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರೊಂದಿಗೆ ಮತ್ತೊಮ್ಮೆ ವಿಕ್ರಮ್‌ನನ್ನು ಕಣ್ತುಂಬಿಕೊಳ್ಳುವ ಭಾರತೀಯರ ಆಸೆ ಕಮರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








