ಬೆಂಗಳೂರು,:
ಹಣ ಪಾವತಿಸುವಾಗ ನಕಲಿ ನೋಟುಗಳ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆಕ್ಸಿಸ್ ಬ್ಯಾಂಕ್ ವಿರುದ್ಧ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಆರ್ ಬಿಐಗೆ ಹಣ ಪಾವತಿಸುವಾಗ 100 ರೂ. ಮುಖಬೆಲೆಯ 18,600 ರೂ.ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿರುವ ಸಂಬಂಧ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ಜೂನ್-ಜುಲೈ ಅವಧಿಯಲ್ಲಿ ಆರ್‍ಬಿಐಗೆ ನೋಟುಗಳನ್ನು ಸಲ್ಲಿಸಲಾಗಿತ್ತು. ಬ್ಯಾಂಕ್ ಆಂತರಿಕ ಲೆಕ್ಕ ಪತ್ರ ಪರಿಶೋಧನೆ ವೇಳೆಯಲ್ಲಿ ನಕಲಿ ಹಣ ಪಾವತಿಯಾಗಿರುವುದು ಆರ್‍ಬಿಐ ಗಮನಕ್ಕೆ ಬಂದಿತ್ತು.
ಈ ಸಂಬಂಧ ಬ್ಯಾಂಕ್‍ನ ಇಶ್ಯೂ ಡಿಪಾರ್ಟ್‍ಮೆಂಟ್ ಮ್ಯಾನೇಜರ್ ಎಂ.ಎಲ್.ಲಕ್ಷ್ಮೀ ಅವರು ಆಕ್ಸಿಸ್ ಬ್ಯಾಂಕ್ ವಿರುದ್ಧ ದೂರು ನೀಡಿದ್ದಾರೆ. ಹಲಸೂರು ಗೇಟ್ ಪೊಲೀಸರು ಬ್ಯಾಂಕ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.ಐಪಿಸಿ ಸೆಕ್ಷನ್ 489 (ಬಿ) ಪ್ರಕಾರ ನೋಟುಗಳ ನಕಲಿ ತಯಾರಿಕೆ ಅಥವಾ ನಕಲಿ ನೋಟುಗಳನ್ನ ಅಸಲಿಯಂತೆ ಬಳಸುವಿಕೆ ಹಾಗೂ ಸೆಕ್ಷನ್ 489 (ಸಿ) ನಕಲಿ ನೋಟುಗಳನ್ನು ಹೊಂದಿರುವುದರ ಅಡಿ ದೂರು ದಾಖಲಾಗಿದೆ. ಸದ್ಯ ನಕಲಿ ನೋಟುಗಳನ್ನು ಸ್ವೀಕರಿಸಿದ್ದು ಹೇಗೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








